ಶರತ್ ಚಕ್ರವರ್ತಿ.

My blogs

Blogs I follow

About me

Gender Male
Location Hassan, Karnataka, India
Introduction ಹುಟ್ಟು: 12 ಏಪ್ರಿಲ್‌ 1988. ಊರು: ಹಾಸನ ಸಮೀಪ ಸಂಕೇನಹಳ್ಳಿ. ಹುದ್ದೆ: ಲಲಿತಕಲಾ (Fine arts) ವಿದ್ಯಾರ್ಥಿ. ನನ್ನ ಬಗ್ಗೆ ಒಂದು ಸಾಲು: ಬರಿಗೈ ದೊರೆ. ================================= ಇಲ್ಲಿಯವರೆವಿಗೂ, ಅಂದರೆ ಗೆಳೆಯರ ಬೈಗುಳಗಳಿಗೆ ಮೊಂಡುಬೀಳಲಾರದೇ ಈ ಬ್ಲಾಗ್ ತೆರೆದ ದಿನದಿಂದ ಸುಮಾರು ಆರು ತಿಂಗಳವರೆಗೆ ನನ್ನ ಬಗ್ಗೆ 'ಬರಿಗೈ ದೊರೆ' ಎಂಬೊಂದೇ ಸಾಲನ್ನು ನಮೂದಿಸಿದ್ದೆ. ಆದರೆ ಈಗ ಮತ್ತದೇ ಗೆಳೆಯರ ಹಾಗೂ ಹಲವೂ ಓದುಗ ಮಿತ್ರರ ಸಲಹೆಯಂತೆ ನನ್ನ ಬಗ್ಗೆ ಒಂದೆರಡು ಮಾತು ಬರೆದುಕೊಳ್ಳಲು ಮುಂದಾಗಿದ್ದೇನೆ. ನನ್ನ ಊರು ಹಾಸನದಿಂದ 7-8 ಮೈಲಿ ದೂರವಿರುವ ಸಂಕೇನಹಳ್ಳಿ ಎಂಬ ಪುಟ್ಟ ಹಳ್ಳಿ. ಓದುತ್ತಿರುವುದು ಮೈಸೂರಿನ ತೆರೆದ ವಿಶ್ವವಿದ್ಯಾನಿಲಯದಲ್ಲಿ ಲಲಿತಕಲೆ. ಸದಾ ಗೊಂದಲಗಳೊಳಗೆ ಕುಳಿತು, ನಿಂತು, ಗೊಂದಲಗಳನ್ನೇ ಹೊದ್ದು ಮಲಗುವಷ್ಟು ಮೊಂಡ ಹಾಗೂ ಸ್ವಲ್ಪ ಸೋಮಾರಿಯು ಹೌದು. ಸಾಹಿತ್ಯದ ಗೀಳು ಯಾವಾಗಿನಿಂದ ಇತ್ತು ಎಂಬುದು ಸ್ವತಃ ನನ್ನ ಗೊತ್ತಿಲ್ಲ. ನನ್ನ ಗೀಜುತ್ತಿದ್ದುದು ಸಾಹಿತ್ಯ ಎಂಬುದು ನನ್ನ ಅರಿವಿಗೇ ಇರಲಿಲ್ಲ. (ಇಂದಿಗೂ ಇಲ್ಲ). ಬರೆಯುದು ನನ್ನ ಸಮಾಧಾನ, ಶೋಕಿಗಳಿಗಷ್ಟೇ. ಆದರೆ ಬರೆದಿದ್ದನ್ನು ಸಂಗ್ರಹಿಸಿಡಬೇಕೆಂಬುದು ನನಗೆ ರೇಜಿಗೆಯ ವಿಷಯ. ಬ್ಲಾಗ್ ಮಾಡಿದ ನಂತರವೂ ಸಹ ಅದೆಷ್ಟೊ ಪದ್ಯಗಳು ಹುಟ್ಟುತ್ತಿದ್ದಂತೆ ಸಮಾದಿ ಸೇರುತ್ತವೆ. ಕೆಲವೊಂದು ಮಾತ್ರ ಗೋರಿ ಕಟ್ಟಿಸಿಕೊಂಡು ಬೀಗುತ್ತವೆ. ಸಂಗ್ರಹ ಯೋಗ್ಯವೋ, ಅಲ್ಲವೋ.. ಹೆಕ್ಕಲು ಹೋಗದೇ ಕೈ ಸಿಕ್ಕದ್ದನ್ನು ಮಾತ್ರ ಬ್ಲಾಗ್ ಮೂಲಕ ಓದುಗರಿಗೆ ಒಪ್ಪಿಸುವ ಪ್ರಯತ್ನದಲ್ಲಿದ್ದೇನೆ. ಧನ್ಯವಾದ.