Rajendra Buradikatti

My blogs

Blogs I follow

About me

Gender Male
Location Shimoga, Karnataka, India
Introduction ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಮೂಲ. ಈಗ ಶಿವಮೊಗ್ಗದಲ್ಲಿ ವಾಸ. ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರಾರಂಭಿಕ ಶಿಕ್ಷಣ. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಮತ್ತು ಎಂ.ಎ. ಪದವಿ. ಚನ್ನೈನ ಸಂಸ್ಥೆಯೊಂದರಿಂದ ಕುಟುಂಬ ಜೀವನ ಶಿಕ್ಷಣ ಸ್ನಾತಕೋತ್ತರ ಡಿಪ್ಲೊಮೊ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಆಧುನಿಕ ಕನ್ನಡ ಮಹಾಕಾವ್ಯಗಳನ್ನು ಕುರಿತು ಮಾಡಿದ ಸಂಶೋಧನೆಗೆ ಡಾಕ್ಟರೇಟ್ ಪದವಿ. ಯುಜಿಸಿಯ ಎನ್.ಇ.ಟಿ ಪಾಸು. ವೃತ್ತಿಯಿಂದ ಮೇಷ್ಟ್ರು. ಒಂದನೇ ತರಗತಿಯಿಂದ ಎಂ.ಎ. ಅಂತಿಮ ಹಂತದವರೆಗೆ ಎಲ್ಲ ಹಂತದ ವಿದ್ಯಾರ್ಥಿಗಳಿಗೆ ಬೋಧಿಸಿದ ಅನುಭವ. ಸಾಹಿತ್ಯ ಮತ್ತು ಸಂಸ್ಕೃತಿ ಆಸಕ್ತಿಯ ಕ್ಷೇತ್ರಗಳು. ಓದುವುದು ಬರೆಯುವುದು ಪ್ರಮುಖ ಹವ್ಯಾಸಗಳು. ದೇಶ ಸುತ್ತುವುದು ಒಂದು ಖಯಾಲಿ. `ಕೆಮ್ಮುಗಿಲು', `ಗುಲಾಬಿ ಮುಳ್ಳು' `ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು' 'ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್' ಪ್ರಕಟಿತ ಕೃತಿಗಳು. ಅನೇಕ ಕವಿತೆ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರ, ಪತ್ರಿಕೆಗಳಲ್ಲಿ ಪ್ರಕಟ. `ಜನಮೆಚ್ಚಿದ ಶಿಕ್ಷಕ'(2002), `ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ'(2003), `ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ'(2004), `ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ'(2013) `ವಿಶ್ವ ಮಾದರಿ ಶಿಕ್ಷಕ ಪ್ರಶಸ್ತಿ (2015) ಬಂದ ಕೆಲವು ಪ್ರಶಸ್ತಿಗಳು. ಜಾತಿ-ವರ್ಗ-ಲಿಂಗ ಮುಂತಾದ ತರತಮಗಳಿಲ್ಲದ ಸಮಸಮಾಜ ನಿರ್ಮಾಣದತ್ತ ಕೈಲಾದ ಕೆಲಸ ಮಾಡುವುದು ಧ್ಯೇಯ.ಪರಸ್ಪರ ದ್ವೇಷ ಅಸೂಯೆಗಳಿಲ್ಲದ, ಪ್ರೀತಿ-ಪ್ರೇಮಗಳಿಂದ ಕೂಡಿದ, ಎಲ್ಲರೂ ಸುಖ-ಸಂತೋಷ ಮತ್ತು ನೆಮ್ಮದಿಗಳಿಂದ ಬದುಕುವ ಸಮಾಜ ನನ್ನ ಕನಸು.
Favorite Music ಸುಗಮ ಸಂಗೀತ
Favorite Books good books of all kind.