ಹನುಮಂತ ಹಾಲಿಗೇರಿ
My blogs
Blogs I follow
| Gender | Male |
|---|---|
| Occupation | ಪತ್ರಕರ್ತ |
| Location | ಕಾರವಾರ, ಕರ್ನಾಟಕ, India |
| Introduction | ಬಾಗಲಕೋಟೆಯ ತುಳಸಿಗೇರಿಯಲ್ಲಿ ಹುಟ್ಟಿದ್ದು. ಬಿಎ ಅರ್ಧಕ್ಕೆ ಬಿಟ್ಟು, ಆಧ್ಯಾತ್ಮದ ಹುಚ್ಚು ಮತ್ತು ಗ್ರಾಮೀಣ ಅಭಿವೃದ್ಧಿ ಕನಸು ನೆತ್ತಿಗೇರಿಸಿಕೊಂಡು ಧಾರವಾಡ ಕರ್ನಾಟಕ ವಿ.ವಿ.ಯ ಗ್ರಾಮೀಣ ಅಭಿವೃದ್ಧಿ ಪದವಿ ಪೂರ್ಣ. ಅದೆ ಅವಧಿಯಲ್ಲಿ ಎಸ್‌ಎಸ್‌ವಾಯ್ ಟೀಚರ್ ಆಗಿ ಮೂರು ವರ್ಷಗಳವರೆಗೆ ಗ್ರಾಮೀಣ ಗುರುಕುಲಗಳನ್ನು ನಡೆಸುತ್ತ ಹಲವಾರು ಗ್ರಾಮೀಣ ಅಭಿವೃದ್ಧಿಯ ಪ್ರಯೋಗಗಳನ್ನು ನಡೆಸಿ ಕೆಲವೊಮ್ಮೆ ವೈಫಲ್ಯ, ಹಲವೊಮ್ಮೆ ಸಾಫಲ್ಯ ಕಂಡದ್ದು ದೊಡ್ಡ ಅನುಭವ. ಅಲ್ಲಿಂದ ಬಿಟ್ಟೆದ್ದು, 'ಭೈಪ್' ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಹಳ್ಳಿಗಳ ಅಲೆದಾಟ. ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿ ಕೊರಳಿಗೆ ಕುತ್ತಾಗುವಷ್ಟರಮಟ್ಟಿಗೆ ಕೈ ಸುಟ್ಟಿಕೊಂಡ ಅನುಭವ. ೨೦೧೦ರಲ್ಲಿ ಪ್ರಕಟವಾದ ಮೊದಲ ಕಥಾ ಸಂಕಲನ 'ಕತ್ತಲಗರ್ಭದ ಮಿಂಚು' ಕೃತಿಗೆ ಕಸಾಪದ ಬಿಎಂಟಿಸಿ ಅರಳು ಪ್ರಶಸ್ತಿ, ಬಿಳಗಿ ದತ್ತಿ ಮತ್ತು ಪ್ರಶಸ್ತಿ ಅತ್ತಿಮಬ್ಬೆ ಪ್ರಶಸ್ತಿ. 'ದೇವರ ಹೆಸರಲ್ಲಿ' ಎಂಬ ಇನ್ನೊಂದು ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಪಡೆದುಕೊಂಡು ರವೀಂದ್ರ ಕಲಾ ಕ್ಷೇತ್ರದಲ್ಲಿ ೨೦೦೮ರಲ್ಲಿ ಪ್ರದರ್ಶನ.ಹಲವಾರು ಕಥಾಸ್ಪರ್ಧೆಗಳಲ್ಲಿ ಬಹುಮಾನ. ೨೦೧೧ರಲ್ಲಿ ಪ್ರಕಟಗೊಂಡ 'ಕೆಂಗುಲಾಬಿ'ಕಾದಂಬರಿಗೆ ಶಿವಮೊಗ್ಗೆಯ ಕರ್ನಾಟಕ ಸಂಘದ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿ. ಇದರ ಬಗ್ಗೆ ನಾಡಿನ ಮೂರ‍್ನಾಲು ಕಡೆ ಸಂವಾದಗಳು ನಡೆದಿವೆ. ಇದು ಪರಿಷ್ಕರಣೆಯೊಂದಿಗೆ ಈಗ ೨ನೆ ಮುದ್ರಣ ಕಂಡಿದೆ. ಸಧ್ಯ ಕಾರವಾರದಲ್ಲಿ ವಿಜಯ ಕರ್ನಾಟಕದಲ್ಲಿ ಜಿಲ್ಲಾ ವರದಿಗಾರ. |
| Interests | ಗ್ರಾಮೀಣ ಪರಿಸರದ ಕತೆ ಕವನ ಓದುವುದು, ಬರೆಯುವುದು, ಜಾನಪದ ಗೀತೆಗಳನ್ನು ಹಾಡುವುದು, ಮಕ್ಕಳೊಂದಿಗೆ ಬೆರೆಯುವುದು, ಕಲಾತ್ಮಕ ಚಿತ್ರಗಳನ್ನು ನೋಡುವುದು, ಗ್ರಾಮೀಣ ಅಭೀವ್ರದ್ದಿಯ ಪ್ರಯೋಗಗಳಲ್ಲಿ ತೋಡಗಿಸಿಕೊಳ್ಳುವುದು ಇತ್ಯಾದಿ,... |
| Favorite movies | ಚಿಗುರಿದ ಕನಸು, ಲಗಾನ್, ಮೈ ಜನುಮದ ಜೋಡಿ, ಆಟೋಗ್ರಾಫ್,ಹ್ಯಾಪಿಡೇಸ್, ಅವತಾರ್ ಇತ್ಯಾದಿ |
| Favorite music | ಜನಪದ ಗೀತೆಗಳನ್ನು ಕೇಳುವುದು, ಓದುವುದು, ಬರೆಯುವುದು, ಪ್ರವಾಸ ಇತ್ಯಾದಿ, |
| Favorite books | ಗಾಂದೀಜಿಯ ಆತ್ಮಕತೆ, ಗ್ರಾಮಾಯಣ, ದೇವನೂರು ಮಹಾದೇವರ ಸಮಗ್ರ ಕಥೆಗಳು, ಅನಂತಮೂರ್ತಿ ಕಾದಂಬರಿಗಳು, ದಿನೇಶ ಅಮ್ಮಿನಮಟ್ಟು ಲೇಖನಗಳು ಇತ್ಯಾದಿ |

