ಮಾಧ್ವ ಯುವ ವೇದಿಕೆ, ಮೈಸೂರು

My blogs

About me

Gender Male
Industry Religion
Location ಮೈಸೂರು, ಕರ್ನಾಟಕ, India
Introduction ಹರಿ ಸರ್ವೋತ್ತಮ ವಾಯು ಜೀವೋತ್ತಮ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪದಾಂಗಳವರ ಮಂತ್ರಾಕ್ಷತೆ ಫಲವಾಗಿ ಜನವರಿ 1 2000 ನೇ ಇಸವಿಯಲ್ಲಿ ಈ ನಮ್ಮ ಮಾಧ್ವ ಯುವ ವೇದಿಕೆ ಜನ್ಮ ತಾಳಿತು. ಯುವಕರಲ್ಲಿ ವೈದಿಕ ಧರ್ಮದ ಜಾಗೃತಿ ಹಾಗೂ ಆಚಾರ್ಯ ಮಧ್ವರ ಶಾಸ್ತ್ರದ ತಿಳುವಳಿಕೆಗಾಗಿ ಈ ನಮ್ಮ ವೇದಿಕೆ ಮಾಧ್ವ ಯುವಕರ ತಾಣವಾಗಿದೆ. ಶ್ರೀ ಪಾದಂಗಳವರ ಆಜ್ಞೆಯಂತೆ, ಧಾರ್ಮಿಕ ಚಟವಟಿಕೆಗಳಲ್ಲದೆ ಸಾಮಾಜಿಕ ಕಾರ್ಯಕ್ರಮವನ್ನು ಸಹಾ, ಅದರಲ್ಲೂ ಆರೋಗ್ಯಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿ ದೀನರ ಒಲವನ್ನು ಸಹ ಸಂಪಾದಿಸುತ್ತಿದ್ದೇವೆ. ಮಾಧ್ವ ಯುವ ವೇದಿಕೆಯ ಹಲವಾರು ಜನಪರ ಕಾರ್ಯಕ್ರಮಗಳನ್ನು ಸಮಾಜದ ಎಲ್ಲಾ ಬಾಂಧವರ ಸಹಾಯ ಹಸ್ತದಿಂದ ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಮಾನ್ಯರೆ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಾಗೃತರಾಗಲು ಇಚ್ಛೆಯಿದ್ದಲ್ಲಿ, ಬಡವರಿಗೆ ಸಹಾಯ ಮಾಡುವ ಮನಸ್ಸಿದ್ದಲ್ಲಿ, ಪ್ರತಿಭೆಯ ಮಹಾಪೂರ ಹೊಂದಿದ್ದಲ್ಲಿ, ಈ ಕೂಡಲೆ ಮಾಧ್ವ ಯುವ ವೇದಿಕೆಯ ಸದಸ್ಯತ್ವವನ್ನು ಪಡೆದುಕೊಳ್ಳಿ. ಬನ್ನಿ, ನಮ್ಮೊಂದಿಗೆ ಸಂಘಟಿತರಾಗಿ, ಸರ್ವೋತ್ತಮನನ್ನು ಸೇವಿಸುವರಾಗಿ, ಜನ್ಮದಲ್ಲಿ ಸಾರ್ಥಕತೆಯನ್ನು ಪಡೆಯುವವರಾಗಿ.