Blogger
ಫಾತಿಮಾ ರಲಿಯಾ
On Blogger since: June 2015
Profile views: 637

My blogs

About me

GenderFemale
Introductionಇನ್ನೂ ಅರ್ಥವಾಗದ ಬದುಕಿನ ಬಗ್ಗೆ ಎಂದೂ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಒಂದು ಪುಟ್ಟ ಹಳ್ಳಿಯಲ್ಲಿ, ತೀವ್ರ ಪ್ರೀತಿಯ ಬಗಲಲ್ಲೇ ಸೂಕ್ಷ್ಮ ಅಸಹನೆಯ ಎಳೆಯನ್ನಿಟ್ಟುಕೊಂಡ ಈ ಮಣ್ಣಿನ ವೈರುಧ್ಯತೆಯ ಮಧ್ಯೆ ಹುಟ್ಟಿ ಬೆಳೆದವಳು ನಾನು.................................................. ಪುಸ್ತಕಗಳಂದ್ರೆ ಪುಷ್ಕಳ ಪ್ರೀತಿ. ಓದು ಹವ್ಯಾಸ ಮತ್ತು ಬದುಕು.ಈಗೀಗ ಅಲ್ಲಿ, ಇಲ್ಲಿ ಅಂತ ಒಂದಿಷ್ಟು ಬರೆಯಲು ಕಲಿಯುತಿದ್ದೇನೆ. ವಿಪರೀತ ಮಾತಾಡುತ್ತೇನೆ ಅನ್ನುವುದು ನನ್ನ ಮೇಲಿರುವ ಆರೋಪ ಮತ್ತು ಮೆಚ್ಚುಗೆ. ಕೆಲವೊಮ್ಮೆ ಗಂಟೆಗಟ್ಟಲೆ ಮಾತಾಡುತ್ತೇನೆ, ಆ ಮಾತಲ್ಲಿ ನೂರಾರು ವಿಷಯಗಳು ಬಂದು ಹೋಗುತ್ತವೆ, ಆದರೆ ಹೇಳಲೇ ಬೇಕಿದ್ದ ಒಂದು ಮಾತು ತುಟಿ ಮೀರಿ ಹೊರಗೆ ಬರುವುದೇ ಇಲ್ಲ. ಹಾಗೇ ತುಟಿ ಮೀರದ ಸಂಚಾರೀ ಭಾವಗಳಿಗೆಲ್ಲಾ ಅಕ್ಷರದ ರೂಪ ಕೊಡುವ ಪುಟ್ಟ ಪ್ರಯತ್ನವಿದು. ಅಮ್ಮ ಮತ್ತು ಅಮ್ಮನ ಪ್ರೀತಿ ನನ್ನೆಲ್ಲಾ ಬರಹಗಳ ಸ್ಥಾಯೀ ಭಾವ ಮತ್ತು ಪ್ರೇರಕ ಶಕ್ತಿ. ಶಾಕುಂತಲೆ, ಅಹಲ್ಯೆ ಮತ್ತು ಊರ್ಮಿಳಾ ನನ್ನ ಪದೇ ಪದೇ ಕಾಡುವ, ಕಾಡಿಸುವ, ಪ್ರಶ್ನೆ ಹುಟ್ಟಿಸುವ, ಉತ್ತರ ಹುಡುಕಲು ಪ್ರೇರೇಪಿಸುವ ಪುರಾಣದ ಪಾತ್ರಗಳು. ಹಾಗಾಗಿ ಅಲ್ಲಲ್ಲಿ ವಿರಹದ, ದಾಖಲಾಗದ ನೋವುಗಳ ಸೂಕ್ಷ್ಮ ಛಾಯೆಯೂ ಇರಬಹುದು.............................................ಉಳಿದಂತೆ, ನಾನು ಸ್ವಲ್ಪ ತರ್ಲೆ, ಜಾಸ್ತೀನೇ ಅಧಿಕಪ್ರಸಂಗಿ. ಅಡುಗೆ ಒಂದು ಬಿಟ್ಟು ಪ್ರಪಂಚದ ಉಳಿದೆಲ್ಲಾ ಕೆಲಸಗಳನ್ನೂ, ಸಂಗತಿಗಳನ್ನೂ ಕಲಿಯಲು ಅತಿ ಉತ್ಸಾಹ ಇರುವ ವಿಕ್ಷಿಪ್ತ ಜೀವಿ.
Google apps
Main menu