Somesh Channur

My blogs

About me

Gender Male
Industry Education
Occupation Kannada Language Teacher, VKK Govt. High School, Hirehadagali, Huvinahadagali Tq, Ballari Dist, Karnataka State, India.
Location ಕನ್ನಡ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಶಾಲೆ ಹಿರೇಹಡಗಲಿ, ಹೂವಿನ ಹಡಗಲಿ.ತಾ (Huvinadagali), ಕರ್ನಾಟಕ, India
Introduction ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Interests ನಾನು ಹುಟ್ಟಿದ್ದು ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ಅಲ್ಲೀಪುರದಲ್ಲಿ. ಅಲ್ಲೀಪುರ ತುಂಗಭದ್ರಾ ನದಿಯ ತಟದಲ್ಲಿದೆ. ತುಂಗಭದ್ರೆಗೆ ಹಿನ್ನೆಲೆಯಾಗಿ ದಕ್ಷಣದಿಂದ ಉತ್ತರಕ್ಕೆ ಹಬ್ಬಿರುವ ಕಪ್ಪತ್ತಗುಡ್ಡ ಪರ್ವತ ಶ್ರೇಣಿಯ ರಮ್ಯ ನೋಟ. ಈ ಪ್ರಕೃತಿ ಸೌಂದರ್ಯದ ನಡುವೆ ಸಿಂಗಟಾಲೂರು ಏತ ಜಲಾಶಯದ ಸುಂದರ ನೋಟ. ಈ ಜಲಾಶಯದ ಹಿನ್ನೀರಿನಲ್ಲಿ ರೆಕ್ಕೆ ಬೀಸಿ ಹಾರುವ ಸಾವಿರಾರು ದೇಶ ವಿದೇಶಿ ಹಕ್ಕಿಗಳ ಸೊಬಗು, ಅವುಗಳ ಬಗೆಬಗೆಯ ಧ್ವನಿ ಮಾಧುರ್ಯ ಸಹೃದಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇಂತಹ ಪ್ರಕೃತಿಯೇ ಬಾಲ್ಯದಲ್ಲಿ ನನ್ನ ತಂದೆ ಶ್ರೀ ನಿಂಗಪ್ಪ ಚನ್ನೂರರವರನ್ನು ಸಹಜವಾಗಿ ಕವಿಗಳನ್ನಾಗಿ ರೂಪಿಸಿದ್ದು. ಇಲ್ಲಿ ರೆಕ್ಕೆ ಬೀಸಿ ಹಾರುತ್ತಾ, ನೀರಿನಲ್ಲಿ ಈಜುತ್ತಾ ನೋಡುಗರನ್ನು ಸೆಳೆಯುವ ಹಕ್ಕಿಗಳ ಛಾಯಾಚಿತ್ರ ತೆಗೆಯಬೇಕೆಂಬ ಆಸೆ ನನಗೆ ಬಾಲ್ಯದಲ್ಲಿಯೇ ಚಿಗುರೊಡೆದಿತ್ತು. ಆದರೆ ಅದು ಕೈಗೂಡಿದ್ದು ಮಾತ್ರ 2013ರಲ್ಲಿ. ಹಕ್ಕಿಗಳ ಛಾಯಾಚಿತ್ರಕ್ಕಾಗಿಯೇ ನಾನು Canon ಕ್ಯಾಮರಾ ವನ್ನು ತೆಗೆದುಕೊಂಡೆನು. ನಂತರ ತುಂಗಭಧ್ರೆಯ ಮಡಿಲಲ್ಲಿ ಹಕ್ಕಿಗಳ ಛಾಯಾಚಿತ್ರ ತೆಗೆಯುವುದು. ಗೂಗಲ್ ನಲ್ಲಿ ಪಕ್ಷಗಳ ಮಾಹಿತಿಯನ್ನು ಹುಡುಕಿ ಧಾಖಲಿಸುವುದು. ಹೀಗೆ ಸುಮಾರು 4 -5 ವರ್ಷಗಳಲ್ಲಿ ಹೂವಿನಹಡಗಲಿಯ ಸುತ್ತಮುತ್ತಲ ಸುಮಾರು 130ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳ ಸಂತತಿಯ ಮಾಹಿತಿಯನ್ನು ದಾಖಲಿಸಿದ್ದೇನೆ. ಈ ಬ್ಲಾಗ್ ರಚನೆಯ ಉದ್ದೇಶ ಹಕ್ಕಿಗಳ ಬಗ್ಗೆ ಮಾಹಿತಿ ಕನ್ನಡದಲ್ಲಿಯೇ ಸಿಗುವಂತೆ ಮಾಡುವುದು, ಮತ್ತು ಹಕ್ಕಿಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಯುವ ಜನತೆಗೆ ಪಕ್ಷಿಗಳ ವೀಕ್ಷಣೆಯ ಹವ್ಯಾಸ ಬೆಳೆಸುವುದು.