Prabhakar. H.R
My blogs
Blogs I follow
| Gender | Male |
|---|---|
| Occupation | TV Anchor(Freelancer) |
| Location | Bangalore, Karnataka, India |
| Introduction | ನನ್ನ ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಮೇಷ್ಟ್ರು ಹೇಳಿದ ಮಾತು ' ನಿನಗೆ ಅನಿಸಿದ್ದು ಬರೀ' ಅದು ಕಥೆಯೇ, ಕಾವ್ಯವೇ, ಆಗಬೇಕೆಂದಿಲ್ಲ...ಆ ಕ್ಷಣದ ಮನಸಿನ ಭಾವನೆ ಬರೀ ಅದು ಯಾವ ಕ್ಷಣ, ಘಟನೆ,ವ್ಯಕ್ತಿಯಿಂದ ಪ್ರಭಾವವಗಿದೆ ಎನ್ನುವುದರ ಬಗ್ಗೆ ಚಿಂತಿಸಬೇಡ..ಒಟ್ಟಿನಲ್ಲಿ ಏನಾದರೂ ಬರೆಯುತ್ತಿರು.." ಈ ಮಾತುಗಳೇ ನನ್ನನ್ನು ಹೆಚ್ಚು ಹುರಿದುಂಬಿಸಿದ್ದು. ಸದಾ ಅಂಕಿ ಸಂಖ್ಯೆಗಳ ಜೊತೆ ಗುದ್ದಾಟ, ತೆರಿಗೆ ಸಲಹೆಗಾರ ನಾಗಿ ವೃತ್ತಿ.., ಹವ್ಯಾಸವಾಗಿ 'ಟಿ ವಿ ನಿರೂಪಕ' ಸಮಾಜದ ವಿವಿಧ ಕ್ಷೇತ್ರಗಳ ಸಾಧಕರ ಜೊತೆ 'ಸಂದರ್ಶನ ಕಾರ್ಯಕ್ರಮದಲ್ಲಿ ಮಾತುಕತೆ..ಅವರ ಅನುಭವದ ನುಡಿಗಳು, ಘಟನೆಗಳು ನೀಡುವ ಹೊಸ ಚೈತನ್ಯ, ಹುಮ್ಮಸ್ಸು, ನೂರಾರು ಸಾಧಕರ ಕ್ರಿಯಾಶೀಲ ವ್ಯಕ್ತಿಗಳ ಸಂಗ ಇವೆಲ್ಲವೂ ಯಾಂತ್ರಿಕ ಬದುಕಿಗೆ ಕೊಡುವ ದೊಡ್ಡ ರಿಲೀಫ್. , ಬಿಡುವಿದ್ದಾಗ ಓದು, ಅಪರೂಪಕ್ಕೊಂದು ಲಾಂಗ್ ಡ್ರೈವ್, ಗೆಳೆಯರ ಜೊತೆ ಹರಟೆ, ನಿರಂತರ ರಕ್ತದಾನ, ಮಳೆಯನ್ನ ನೋಡಿ ಪುಳಕಗೊಂಡು ನಡೆಯುವುದು, ಹಸಿರ ವನರಾಶಿ ನನ್ನನ್ನು ಹೆಚ್ಚು ಸೆಳೆಯುವುದು. ಜೊತೆಗೆ ಜೋರು ಮಳೆಯಲ್ಲಿ ವಿರಹ ಗೀತೆಗಳನ್ನು ಕೇಳುತ್ತ ಒಬ್ಬನೇ ಕಾರ್ ಡ್ರೈವ್ ಮಾಡುವುದೆಂದರೆ ಇನ್ನು ಇಷ್ಟ. ಇವೆಲ್ಲದಿಕ್ಕಿಂತ ಹೆಚ್ಚಾಗಿ ಜೀವನ ಹೇಗೆ ಬರುತ್ತದೋ ಹಾಗೆ ಸ್ವೀಕರಿಸುವ ಅದರೊಂದಿಗೆ ಬೇಸರಿಸಿಕೊಳ್ಳದೆ ನಡೆಯುವುದು ಬಹುಶ ಬದುಕು ನನಗೆ ಕಳಿಸಿದ ಬಹು ದೊಡ್ಡ ಪಾಠ. 'ಸಮಚಿತ್ತ' ಎಂಬ ಪದ ನನ್ನನ್ನು ಹೆಚ್ಚು ಸೆಳೆದದ್ದು. ಹಾಗಿರಲು ನಿರಂತರ ಪ್ರಯತ್ನ ಸಾಗುತ್ತಲೇ ಇರುತ್ತದೆ. ಕೊನೆಯ ಮಾತು: ನನ್ನ ಬರಹಗಳನ್ನು ಓದಿ ಅಭಿಪ್ರಾಯ ತಿಳಿಸಿ ಅದೂ ನಿಮಗೆ ಬಿಡುವಿದ್ದಾಗ..!..ಇಲ್ಲವೆಂದರೆ ನನ್ನ ತಪ್ಪುಗಳು ನನಗೆ ಹೇಗೆ ತಿಳಿಯಬೇಕು? |
| Interests | ದೂರದರ್ಶನದ 'ಬೆಳಗು' ಕಾರ್ಯಕ್ರಮದಲ್ಲಿ ನಿರೂಪಕನಾಗಿ ಸುಮಾರು 800ಕ್ಕು ಹೆಚ್ಹು ವಿವಿಧ ಕ್ಷೇತ್ರದ ಗಣ್ಯರನ್ನ, ಸಾಧಕರನ್ನ ನೇರಪ್ರಸಾರದ ಕಾರ್ಯಕ್ರಮದಲ್ಲಿ ಸಂದರ್ಶಿಸಿರುವೆ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಮಾರಂಭ, ನಾಟಕೋತ್ಸವ, ಸಂಗೀತ ಸಂಜೆ ಹೀಗೆ ಹತ್ತು ಹಲವು ರೀತಿಯ ಕಾರ್ಯಕ್ರಮಗಳಲ್ಲಿ ನಿರೂಪಣೆ. ನಿರಂತರವಾಗಿ ರಕ್ತದಾನ ಮಾಡುವುದು ಬರವಣಿಗೆ |
| Favorite movies | love stories |
| Favorite music | hindustaani... |
| Favorite books | so many |
If your whole body were a hot air balloon, would you stop eating spicy food?
ya
