KiranP
My blogs
| Gender | Male |
|---|---|
| Location | Bangalore, Karnataka, India |
| Introduction | ಹೆಲ್ಲೋ, ನಾನು ಕಿರಣ್. ವೃತ್ತಿಯಲ್ಲಿ ನಾನೊಬ್ಬ ಸಾಫ್ಟ್-ವೇರ್ ಎಂಜಿನಿಯರ್. ನನ್ನ ಹಾಬಿಗಳೆಂದರೆ ಟ್ರೆಕ್ಕಿಂಗ್(ಚಾರಣ), ಕಂಪ್ಯೂಟರ್ ಗೇಮ್ ಆಡುವುದು (ಈಗ ಸ್ವಲ್ಪ ಕಡಿಮೆ ಆಗಿದೆ), ಮತ್ತು ಉತ್ತಮ ಪುಸ್ತಕಗಳನ್ನು ಓದುವುದು (ಇತ್ತೀಚೆಗೆ ಇದು ಹೆಚ್ಚಾಗಿದೆ). ನನ್ನ ಸಧ್ಯದ ಆಸೆಗಳೆಂದರೆ "ಸ್ಕೈ ಡೈವಿಂಗ್", "ಸ್ಕೂಬಾ ಡೈವಿಂಗ್", "ಹಲವು ರೋಮಾಂಚಕಾರಿ ಟ್ರೆಕ್ಕಿಂಗ್ ಮಾಡುವುದು", "ಬ್ರೆಜಿಲ್ ನ ಕಾರ್ನೀವಾಲ್ ಫೆಸ್ಟಿವಲ್ ನೋಡುವುದು", "ಒಂದು ವರ್ಷ ಸಿಂಗಾಪೂರ್ ನಲ್ಲಿ ಕೆಲಸ ಮಾಡುವುದು", "ಒಂದು ಒಳ್ಳೆಯ ತೋಟ ಮಾಡುವುದು", "ನನ್ನ ಸ್ವಂತದ ಒಂದು ಕಂಪನಿ ತೆರೆಯುವುದು", "ಒಂದು ಬಿ.ಎಮ್.ಡಬ್ಲೂ ಕಾರ್ ಕೊಂಡುಕೊಳ್ಳುವುದು", "ಚೆನ್ನಾಗಿ ಈಜಲು ಕಲಿಯುವುದು"... ಹೀಗೆ ಇನ್ನೂ ಹಲವಾರಿವೆ. ಹಲವನ್ನು ಸಧ್ಯದಲ್ಲೇ ಪೂರ್ತಿಗೊಳಿಸುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಾನು ನನ್ನ ಪರಿಚಯ ಮಾಡಿಕೊಳ್ಳುವ ಬದಲು ಇಲ್ಲಿ ನನ್ನ ಆಸೆಗಳನ್ನೇಕೆ ಬರೆದಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಮನುಷ್ಯನ ಆಸೆಗಳೇ ಅಲ್ಲವೆ ಆತನ ವ್ಯಕ್ತಿತ್ವವನ್ನು ರೂಪಿಸುವುದು!! ನಾನಿನ್ನೂ ಕಲಿಕೆಯ ಹಂತದಲ್ಲಿದ್ದೇನೆ. ಇಲ್ಲಿ ತಪ್ಪುಗಳು ಸಹಜ ಮತ್ತು ಅನಿವಾರ್ಯ. ಅಲ್ಲದೇ, ಕಲಿತದ್ದನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಅದನ್ನು ಸುಲಭದಲ್ಲಿ ಮರೆಯದೇ ನೆನಪಿಟ್ಟುಕೊಳ್ಳಬಹುದಂತೆ. ಹಾಗಾಗಿ ಬ್ಲಾಗ್ ಒಂದನ್ನು ಬರೆಯುತ್ತಿದ್ದೇನೆ, www.Hosadina.BlogSpot.com ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನ್ನ ಈ ಮಿಂಚಂಚೆಗೂ(e-mail) ಬರೆಯಬಹುದು: kiran.gps@gmail.com |

