ಅಜ್ಞಾನಿಯ ದಿನಚರಿ

My blogs

Blogs I follow

About me

Gender Male
Introduction ನನ್ನ ಪ್ರಕಾರ ಬರೆವಣಿಗೆಯೆಂದರೆ ಬದುಕನ್ನು ಕಲಸಿ ಬಳಿಯುವ ಪ್ರಕ್ರಿಯೆ. ನನ್ನನ್ನು ನಾನು ಸೋಸಿಕೊಳ್ಳುವ ಬಗೆ; ಕೊಂದುಕೊಳ್ಳುವ ಬಗೆ; ಆ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಬಗೆ! ಹೋಗಬೇಕು ಅನಿಸಿದರೆ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗಿಯಾಗುವೆ. ಬರೆವಣಿಗೆ ನನ್ನನ್ನೇ ನಾನು ಉದ್ಧಾರ ಮಾಡಿಕೊಳ್ಳಲು ಇರುವ ಔಷಧವಾದ್ದರಿಂದ ಪ್ರಚಾರ, ಲಾಬಿಗಳು ನನ್ನನ್ನು ಇಡಿಯಾಗಿ ಸುಡುತ್ತವೆ. ಹೇಳಿಕೊಳ್ಳಲು, ಹೆಸರಿನ ಮುಂದೆ ಬರೆದುಕೊಳ್ಳಲು ಆರೇಳು 'ಡಿಗ್ರಿ'ಗಳಿವೆ. (ಯಾರಿಗಾದರೂ ಉಪಯೋಗವಾದಲ್ಲಿ ಅವುಗಳನ್ನು ಉಚಿತವಾಗಿ ಕೊಡಲು ಸಿದ್ಧನಿದ್ದೇನೆ). ಬರೆಯುತ್ತಿರುವ ಸಾಕ್ಷಿಗೆ ಮೂರು ಕೃತಿಗಳು ಹುಟ್ಟಿವೆ- 'ಗಾಯದ ಹೂವುಗಳು' 'ಕಡಲ ಕರೆ' ಮತ್ತು 'ಕಣ್ಣಲ್ಲಿಳಿದ ಮಳೆಹನಿ'. ಈ ಕೃತಿಗಳಿಗೆ 'ಕಡೆಂಗೋಡ್ಲು ಕಾವ್ಯ ಪುರಸ್ಕಾರ'(೨೦೧೫), 'ಬೇಂದ್ರೆ ಗ್ರಂಥ ಬಹುಮಾನ'(೨೦೧೭) ಮತ್ತು ಚಿ. ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ(೨೦೨೧) ಒಲಿದಿವೆ. ಸಿನಿಮಾ, ಫೋಟೋಗ್ರಫಿ, ಸಂಗೀತ, ಕಲೆ, ಕ್ರೀಡೆ, ಪ್ರವಾಸ, ಟ್ರೆಕ್ಕಿಂಗ್ ಮತ್ತಿತರ ಹುಚ್ಚುಗಳಿವೆ. ಏಕಾಂತ ನನ್ನ ಸಂಗಾತಿ!