kiran
My blogs
| Gender | Male |
|---|---|
| Industry | Student |
| Location | Bangalore, Karnataka, India |
| Introduction | ಬದುಕಿನ ಸ್ವಾರಸ್ಯ ಹುಡುಕಿ ಹೊರಟಂತೆ , ಇಷ್ಟೇ ಎಂದು ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ಧುತ್ತೆಂದು ಮತ್ತೊಂದು ಪುಟ ತೆರೆದುಕೊಳ್ಳುತ್ತೆ . ಇಷ್ಟು ಹೊತ್ತು ಕಲಿತದ್ದು ಅರಿತದ್ದು ಕಣ್ಣ ಮುಂದೆಯೇ ಮರೆಯಾಗಿ ಮತ್ತೆ ಮತ್ತೆ ಜೀವನದ ಸನ್ನಿವೇಶಗಳು ಒಮ್ಮೊಮ್ಮೆ ಅಚ್ಚರಿಯಲ್ಲಿ ಕೆಲವೊಮ್ಮೆ ಅಸಹಾಯಕತೆಯಲ್ಲಿ ನೂಕಿ ಅದೆಂಥದೋ ವಿಚಿತ್ರ ಆನಂದದಿಂದ ನಗುತ್ತಿರುವಂತೆ ಭಾಸವಗಿದ್ದು ನೂರೆಂಟು ಬಾರಿ . ಹಾಗೊಮ್ಮೆ ಹೀಗೊಮ್ಮೆ ಸಂತೋಷದ ಹರಿವಾಣವೊಡ್ಡಿ ಎಷ್ಟು ಬೇಕೋ ಬಾಚಿಕೋ ಎಂದು ದಿಗ್ಭ್ರಮೆಗೊಳಿಸಿದ್ದೂ ಉಂಟು. ಹೀಗೆ ಮಗುವನ್ನೂ ಚಿವುಟುವ ತೊಟ್ಟಿಲನ್ನೂ ತೂಗುವ ಬದುಕನ್ನು ಅಕ್ಕರೆಯ ತಾಯಿಎಂದೂ ಭಾವಿಸಲಾಗದೆ ಕಲ್ಲು ಹೃದಯದ ಕ್ರೂರಿಯೂ ಎನ್ನಲಾರದೆ ಮುಂದೆ ಸಾಗುತ್ತ ಬರುವುದೇ ಒಳಿತೋ ಏನೋ! ಇದಿಷ್ಟು ಜೀವನದ ಬಗೆಗಿನ ನನ್ನ ತೊಳಲಾಟ . ಕಲಿತದ್ದು ಬಹಳಷ್ಟು . ಕಲಿಯ ಬೇಕಿರುವುದು ಆಕಾಶದಷ್ಟು ಅನಂತ . ಮನುಷ್ಯನು ಪರರಿಗೆ ಕೊಡುವ ಉಪದೇಶವನ್ನು ತಾನು ಪಾಲಿಸಿದರೆ ಸ್ವತಃ ಅವನೇ ತನ್ನ ಗುರುವಾಗಬಲ್ಲ ಎಂದು ನಾನೂ ಕೂಡ ನಂಬುವವನು . ಆದರೆ ಎಂದಾದರೊಮ್ಮೆ ನಿಂತ ನೀರಾಗಿಬಿಟ್ಟರೆ ? ಹರಿಯುವ ನದಿಯಾಗಿ ಸಾಗರ ಸೇರುವ ಆಸೆ . ಹೆಸರು ಕಿರಣ್ . ಓದಿದ್ದು B.E .ಆಧ್ಯಾತ್ಮವೆಂದರೆ ಪ್ರೀತಿ . ಓದುಗಾರಿಕೆಯಷ್ಟು ಆತ್ಮೀಯ ಯಾವುದೂ ಇಲ್ಲ. ಬದುಕಿನ ತಿರುಳು , ತಿರುವುಗಳನ್ನು ಹಂಚಿಕೊಳ್ಳುವುದಕ್ಕೆ ಈ ಪ್ರಯತ್ನ. |
| Favorite music | classical,hip-hop |
| Favorite books | The last lecture,kite runner,Deception point,The 2 states,Five point someone,Harry Potter Series |
