Bhajane - Dasara Hadugalu ಭಜನೆ - ದಾಸರ ಹಾಡುಗಳು
My blogs
| Introduction | 'ಕಲಿಯುಗದಲಿ ಹರಿ ನಾಮವ ನೆನೆದರೆ, ಕುಲಕೋಟಿಗಳುದ್ಧರಿಸುವವು' . ಇದು ದಾಸ ಶ್ರೇಷ್ಠರಾದ ಶ್ರೀ ಪುರಂದರದಾಸರ ವಾಣಿ. ಸಕಲ ವೇದ ಶಾಸ್ತ್ರಗಳ ಸಾರವನ್ನು ಸರಳ ಕನ್ನಡದಲ್ಲಿ, ಅನೇಕ ದಾಸರ ಮತ್ತು ಅಪರೋಕ್ಷ ಜ್ಞಾನಿಗಳ ಬಾಯಿಂದ ನುಡಿಸಿದ ಭಗವಂತನ ಕರುಣೆಯನ್ನು ವರ್ಣಿಸಲಸದಳ. ಇಂತಹ ದಾಸರ ಕೀರ್ತನೆಗಳನ್ನು ಪಾಮರರಾದ ನಾವು ತಿಳಿದು ಹಾಡುವುದರಿಂದ, ಶ್ರೀ ಭಗವಂತನನ್ನು ಅರ್ಚಿಸಿದಂತೆ. ರಾಗ, ತಾಳ, ಭಾವದಿಂದ ಭಗವಂತನನ್ನು ವರ್ಣಿಸುವ ಭಜನೆಗಳನ್ನು ಅನುಭವಿಸಿ ಹಾಡುವಾಗ ಆಗುವ ಆನಂದ ಅಪಾರ. |
|---|
