ಕಾವ್ಯಾನುರಾಗ

My blogs

About me

Gender Male
Industry Communications or Media
Occupation ಆಡಿಯೋ/ವಿಡಿಯೋ ಮೇಕರ್, ವಾರ್ತಾ ವಾಚಕ, ಆಕಾಶವಾಣಿ ಉದ್ಘೋಷಕ
Location ಕಲಬುರಗಿ, ಕರ್ನಾಟಕ, India
Introduction ಮೂಲತಃ ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ‌ ಪುಟ್ಟ ಹಳ್ಳಿ ಗಾಂಧಿನಗರ ನನ್ನ ಊರು. ಹಚ್ಚ ಹಸಿರಿನ ಬೆಟ್ಟ ಗುಡ್ಡದ ಮಡಿಲಿನಲ್ಲಿ ಆಟ‌ ಆಡುತ್ತ, ಹೊಲದಲ್ಲಿ ಕೆಲಸ ಮಾಡುತ್ತ ಓದು ಬರಹ ಕಲಿತೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಮ್ಮೂರಿನಿಂದ ೩ ಕಿಲೋಮೀಟರ್ ದೂರದ ತಾಳಮಡಗಿಗೆ ನಡೆದು, ಪಿಯುಸಿ, ಪದವಿಯನ್ನು ಹುಮನಾಬಾದಿನಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಹೋಗಿ ಕಲಿತೆ. ನಂತರ ಕಲಬುರಗಿಗೆ ೨೦೦೩ ರಲ್ಲಿ ಎಂಎ ಓದಲು ಬಂದೆ. ಆ ಎರಡು ವರ್ಷಗಳಲ್ಲಿ ಸಾಹಿತ್ಯದೆಡೆ ಮತ್ತಷ್ಟು ಆಸಕ್ತಿ ಮೂಡಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಬಾಲ್ಯದಿಂದಲೇ ರೇಡಿಯೋ ಕೇಳುವ ಹಂಬಲ ಇದ್ದುದರಿಂದ ೨೦೦೬ ರಲ್ಲಿ ಆಕಾಶವಾಣಿ ಕಲಬುರಗಿ ಕೇಂದ್ರದಲ್ಲಿ ಉದ್ಘೋಷಕನಾಗಿ ಸೇರಿ ಕಾರ್ಯನಿರ್ವಹಿಸತೊಡಗಿದೆ. ೨೦೦೮ ರಲ್ಲಿ ಎಫ್ಎಂ ವಾಹಿನಿಯಲ್ಲಿ ರೇಡಿಯೋ ಜಾಕಿಯಾಗಿ, ಹಿರಿಯ ಕಾರ್ಯಕ್ರಮ ನಿರ್ವಾಹಕನಾಗಿ ಮತ್ತು ಸೌಂಡ್ ಇಂಜಿನಿಯರಾಗಿ ೨೦೧೫ ರವರೆಗೆ ಕಾರ್ಯನಿರ್ವಹಿಸಿದೆ. ೨೦೧೪ರಿಂದ ಕರ್ನಾಟಕದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳು ಮತ್ತು ಡಾಕುಮೆಂಟರಿಗಳನ್ನು ತಯ್ಯಾರಿಸಿ ನನ್ನ AV Media Solutions ಮೂಲಕ ಧ್ವನಿ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆನೆ. ಈಗ ಸುದ್ದಿ ಸಮಯ ಸುದ್ದಿ ವಾಹಿನಿಯಲ್ಲಿ ಮುಖ್ಯ ಸಂಕಲನಕಾರ, ವಾರ್ತಾವಾಚಕ, ಸುದ್ದಿ ಸಂಪಾದಕನಾಗಿ ಮತ್ತು ಆಕಾಶವಾಣಿಯಲ್ಲಿ ಉದ್ಘೋಷಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
Interests ಸಾಹಿತ್ಯ ಓದು ಮತ್ತು ಕಥೆ ಕವನ ಬರೆಯುವುದು, ಹಳೆಯ ಚಿತ್ರರಂಗದ ಅಧ್ಯಯನ: ಹಳೆಯ ಮತ್ತು ಹೊಸ ಸಿನೆಮಾಗಳ ವೀಕ್ಷಣೆ, ಕ್ರಿಕೇಟ್ ತುಂಬಾ ಇಷ್ಟ.
Favorite Movies ಕಸ್ತೂರಿ ನಿವಾಸ, ನಾಗರಹಾವು, ಬಂಗಾರದ ಮನುಷ್ಯ.
Favorite Music ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳು, ಭಾವಗೀತೆಗಳು, ಗಜಲ್ಗಳು.
Favorite Books ಎಸ್.ಎಲ್.ಭೈರಪ್ಪನವರ ಕಾದಂದರಿಗಳು, ಗಿರೀಶ್ ಕಾರ್ನಾಡರ ನಾಟಕಗಳು, ಕೆ.ಪಿ.ಪೂರ್ಣಚಂದ್ರರ ಸಾಹಿತ್ಯ.