ವೀರಣ್ಣ ಮಂಠಾಳಕರ್

My blogs

About me

Gender Male
Industry Publishing
Occupation ಪತ್ರಕತ೯, ಲೇಖಕ, ಒಂದಿಷ್ಟು ಕವನಗಳು ಗೀಚುವುದು
Location ಬಸವಕಲ್ಯಾಣ, ಬೀದರ ಜಿಲ್ಲೆ, ಭಾರತ, ಕನಾ೯ಟಕ, India
Links Wishlist
Introduction ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕಥೆ, ಕವನ, ಲೇಖನ, ಹನಿಗವನ, ಕಾದಂಬರಿ ಸೇರಿದಂತೆ ಮುಂತಾದ ಪ್ರಕಾರದ ಬರಹಗಳನ್ನು ಬರೆಯುವುದು. ಎಲ್ಲಾ ಕನ್ನಡದ ಪತ್ರಿಕೆಗಳು ಓದುವ ಹವ್ಯಾಸ ಕಳೆದ ಎರಡು ದಶಕಗಳಿಗಿಂತ ಮುನ್ನ ಬಂದಿರುವ ಚಟ ಬಿಡಲಾಗದು. ಅದರ ಪ್ರತೀಕವೆಂಬಂತೆ ಅನುಭವದ ಚೌಕಟ್ಟಿನಲ್ಲಿ ಭಾವಾಂತರಂಗ, ಸುಳಿಗಳು, ಗಾಂಧಿ ಆಗ್ಬೇಕಂದುಕೊಂಡಾಗ (ಸ್ವರಚಿತ ಕವನ ಸಂಕಲನಗಳು) ಹಾಗೂ ಹನಿಜೇನು (ಸಂಪಾದಿತ ಕೖತಿ) ಪ್ರಕಟಿಸಿದ್ದೇನೆ. ಸಂಕಲ್ಪ ಕನ್ನಡ ಮಾಸ ಪತ್ರಿಕೆ 2005ರಲ್ಲಿ ಆರಂಭಿಸಿ ಆಥಿ೯ಕ ಮುಗ್ಗಟ್ಟಿನಿಂದ ನಿಲ್ಲಿಸಬೇಕಾದ ಅನಿವಾಯ೯ತೆ. ನವೆಂಬರ್-2012 ನೇ ಸಾಲಿನ ಪ್ರೇರಣ ಕನ್ನಡ ಮಾಸ ಪತ್ರಿಕೆಗೆ ವ್ಯವಸ್ಥಾಪಕ ಸಂಪಾದಕನಾಗಿ ಸೇವೆ. ಇದೀಗ ಕನ್ನಡಪ್ರಭ ಪತ್ರಿಕೆಯ ಬಸವಕಲ್ಯಾಣ ವರದಿಗಾರನಾಗಿ ಕಳೆದ ಡಿಸೆಂಬರ್-2010 ರಿಂದ ಸೇವೆ ಸಲ್ಲಿಸುತ್ತಿರುವುದು. ಹಲವು ತೊಂದರೆಗಳ ಮಧ್ಯೆಯೂ ಸಾಹಿತ್ಯ ಕೈಬಿಟ್ಟು ಹೋಗದೇ ಉಳಿದುಕೊಂಡಿರುವುದು ವಿಶೇಷ. ಬದುಕಿನ ಜಂಝಾಟದಲ್ಲಿ ಹೊತ್ತು ಕೂಳಿಗೂ ತೊಂದರೆಯಾದರೂ ಸಾಹಿತ್ಯ ಓದು-ಬರಹದಿಂದ ಸ್ವಲ್ಪ ನೆಮ್ಮದಿಯ ಜೀವನ ಹೇಗೋ ಅಂದುಕೊಂಡಂತೆ ನಡೆಯದಿದ್ದರೂ ನಡೆಸಿಕೊಂಡಂತಾದರೂ ಜೀವನ ಸಾಗುತ್ತಿದೆ.
Interests ನಾನೊಬ್ಬ ಸಾಮಾನ್ಯ ವ್ಯಕ್ತಿ. ನನ್ನ ಮೂಲ ಹವ್ಯಾಸಗಳು ಕಥೆ, ಕವನ, ಕಾದಂಬರಿ ಮತ್ತು ವಿವಿಧ ಲೇಖನಗಳನ್ನು ಬರೆಯುವುದು. ವಾಸ್ತವಿಕ ಜೀವನದ ಕುರಿತು ಬರೆಯುವುದೇ ನನ್ನ ಮೂಲ ಧ್ಯೇಯವಾಗಿದೆ. ಈಗಾಗಲೆ ಕನ್ನಡದಲ್ಲಿ ನನ್ನ ಸ್ವರಚಿತ ಐದು ಪುಸ್ತಕಗಳು ಪ್ರಕಟವಾಗಿವೆ. ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ನನ್ನ ಪ್ರಮುಖ ಕ್ರತಿಯಾಗಿದೆ. ನಾನೊಬ್ಬ ಹವ್ಯಾಸಿ ಬರಹಗಾರನಾಗಿ. ಪತ್ರಿಕೊಂದರ ವರದಿಗಾರನಾಗಿ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಕಾಯ೯ನಿವ೯ಹಿಸುತಿದ್ದೇನೆ. ಚಲನಚಿತ್ರ ಗೀತೆಗಳು ಬರೆಯುವುದು ನನ್ನ ಹವ್ಯಾಸಗಳಲ್ಲಿ ಒಂದಾಗಿದೆ. ಆಸಕ್ತ ಕನ್ನಡ ಚಲನಚಿತ್ರ ನಿದೇ೯ಶಕರಿಗೆ ತಕ್ಕಂತೆ ಆಧುನಿಕ ಚಿತ್ರಗೀತೆಗಳನ್ನು ಬರೆದುಕೊಡಲು ಸಿದ್ಧನಿದ್ದೇನೆ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಪ್ರಕಟಿಸಿದ್ದೇನೆ. ಅಪ್ರಕಟಿತ ಕ್ರತಿಗಳಲ್ಲಿ ಎರಡು ಕಾದಂಬರಿಗಳು, ಮೂರು ಲೇಖನ ಸಂಕಲನಗಳು ಪ್ರಕಟಣೆಗೆ ಸಿದ್ಧವಾಗಿವೆ. ಅನೇಕ ಬಿಡಿ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬರವಣಿಗೆಯಲ್ಲಿ ನನ್ನ ಬದುಕಿನ ಗುರಿ, ಬರವಣಿಗೆಯಿಂದ ಮಹತ್ವದ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದೇನೆ. ಇನ್ನೂ ಸಾಕಷ್ಟು ಕೆಲಸಗಳು ಮಾಡಬೇಕಾಗಿದೆ. ವೀರಣ್ಣ ಮಂಠಾಳಕರ್
Favorite Movies ಸಾಮಾಜಿಕ, ಪ್ರೀತಿ-ಪ್ರೇಮ ಆಧಾರಿತ ಕೌಟುಂಬಿಕ ಜೀವನದ ಸಿನಿಮಾಗಳು
Favorite Music ಕನ್ನಡ ಉತ್ತಮವಾದ ಹಳೇ, ಹೊಸ ಸಿನಿಮಾ ಗೀತೆಗಳು ಮತ್ತು ಸಂಗೀತ ನಿದೇ೯ಶಕರಾದ ಕನ್ನಡದ ಗುರುಕಿರಣ, ಮತ್ತು ಎ.ಆರ್.ರಹೆಮಾನ್
Favorite Books ಕನ್ನಡದ ಪ್ರಮುಖ ಎಲ್ಲಾ ಲೇಖಕರ ಕಥೆ, ಕವನಗಳು, ಕಾದಂಬರಿ ಪುಸ್ತಕಗಳು ಓದುವ ಆಸಕ್ತಿ ನಿರಂತವಾಗಿದೆ. ಯುವ ಲೇಖಕರ ಸಾಹಿತ್ಯದ ಕುರಿತು ಕುತೂಹಲ.