Blogger
ಒಮ್ಮೆ ಕಚೇರಿಯಲ್ಲಿ ಹೀಗೇ!
On Blogger since: March 2008
Profile views: 639

My blogs

About me

Locationಬೆಂಗಳೂರು, ಕರ್ನಾಟಕ, India
Introductionಕೂತು ಹರಟುತ್ತಿದ್ದಾಗ ಹೊಳೆದ ಕಲ್ಪನೆ ಈ ಬ್ಲಾಗ್‌. ಚಾಮರಾಜ ಸವಡಿ, ತುಷಾರ ಕವಳೇಕರ್‌, ಶ್ರೀದೇವಿ ಕಳಸದ, ರೇವಣ್‌ ಜೇವೂರ, ಕೀರ್ತಿ ಶಂಕರಘಟ್ಟ, ಮಂಜುನಾಥ ಬಂಡಿ ಕೂತು ಮಾತನಾಡುತ್ತಿದ್ದಾಗ, ನಾವೆಲ್ಲ ಸೇರಿಕೊಂಡು ಏಕೆ ಬ್ಲಾಗ್‌ ಒಂದನ್ನು ಪ್ರಾರಂಭಿಸಬಾರದು ಎಂದು ಪ್ರಶ್ನಿಸಿಕೊಂಡಾಗ, ’ಅಂಗಳ’ ರೂಪುತಳೆಯಿತು. ನಮ್ಮ ನಮ್ಮ ಮನಸ್ಸಿನಲ್ಲಿ ಕೂತ ಅನಿಸಿಕೆಗಳಿಗೆ ಹೊಸ ರೂಪು ಕೊಡುವ ಪ್ರಯತ್ನ ಈ ’ಅಂಗಳ’. ಇಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಆಯಾ ಲೇಖಕರವು. ಆದರೆ, ಎಲ್ಲರ ಅಭಿಪ್ರಾಯವನ್ನು ’ಅಂಗಳ’ ಸಾಮೂಹಿಕವಾಗಿ ಪ್ರತಿನಿಧಿಸುತ್ತದೆ. ಉಳಿದಂತೆ, ಹೇಳುವುದು ಬೇಕಾದಷ್ಟಿದೆ. ನಾವು ಏನೋ ಅಂದುಕೊಂಡಿರುತ್ತೇವೆ. ಆದರೆ, ಹೇಳಲು ಆಗಿರುವುದಿಲ್ಲ. ಇನ್ನು ಯಾವುದೋ ಭಾವನೆಗಳು ಹೇಳಿದ್ದಕ್ಕೆ ಸತ್ತು ಹೊಗಿರುತ್ತವೆ. ಅಂಥ ಎಲ್ಲ ಅಘಟಿತ ಮತ್ತು ಅಂದುಕೊಂಡ ಭಾವನೆಗಳಿಗೆ ಅಭಿವ್ಯಕ್ತಿ ಈ ’ಅಂಗಳ’. ಇದು ಮನೆಯ ಅಂಗಳದಷ್ಟೇ ಆತ್ಮೀಯ, ನೇರ ಹಾಗೂ ಮುಕ್ತ. ಇಲ್ಲಿ ಯಾರೂ ಮನಸ್ಸಿನೊಳಗಿನ ಮಾತನ್ನು ಅದುಮಿಟ್ಟುಕೊಳ್ಳಬೇಕಿಲ್ಲ. ಅಂದುಕೊಂಡಿದ್ದನ್ನು ಹೇಳಿಕೊಂಡ ಮಾತ್ರಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಕಿಲ್ಲ. ’ಅಂಗಳ’ ನಮ್ಮೆಲ್ಲ ಮನಸ್ಸಿನ ಅಭಿವ್ಯಕ್ತಿ. ಅದು ಹಾಗಿದ್ದರೇ ಚೆನ್ನ! ಉಳಿದಂತೆ, ಬ್ಲಾಗ್‌ ಉಂಟು, ನೀವುಂಟು, ನಿಮ್ಮ ಅಭಿಪ್ರಾಯವುಂಟು. ಇಷ್ಟವಾದರೆ ಬೆನ್ನು ತಟ್ಟಿ, ಬೇಸರವಾದರೆ ಬೆನ್ನನ್ನು ಜೋರಾಗಿ ತಟ್ಟಿ- ಕೊಂಚ ನೋವಾದರೆ, ನಾವೂ ತಿದ್ದಿಕೊಳ್ಳಬಹುದು! - ಚಾಮರಾಜ ಸವಡಿ, ತುಷಾರ ಕವಳೇಕರ್‌, ಶ್ರೀದೇವಿ ಕಳಸದ, ರೇವಣ್‌ ಜೇವೂರ, ಕೀರ್ತಿ ಶಂಕರಘಟ್ಟ ಮತ್ತು ಮಂಜುನಾಥ ಬಂಡಿ.
Google apps
Main menu