ನೂರೆಂಟು ಬಣ್ಣದ ನವಿಲಗರಿ

My blogs

About me

Gender Male
Occupation Education
Location Sringeri/ MangaLooru, Karnataka, India
Introduction ನಾನು ಅರುಣ. ನನ್ನದು ಮಲೆನಾಡಿನ ಮೂಲೆಯಲ್ಲಿರುವ 'ನೈಭಿ' ಎಂಬ ಪುಟ್ಟ ಊರು. ಅಪ್ಪ ಲಕ್ಷ್ಮೀನಾರಾಯಣ. ಅಮ್ಮ ಶಾರದೆ. ಪ್ರೀತಿಯ ತಂದೆತಾಯಿ. ಒಂದರಿಂದ ಹತ್ತನೇ ತರಗತಿಯವರೆಗೆ ಓದಿದ್ದು ಶೃಂಗೇರಿಯ ಸಚ್ಚಿದಾನಂದಪುರದ 'ಜೇಸೀಸ್ ಶಾಲೆ'ಯಲ್ಲಿ. ಪದವಿ ಪೂರ್ವ ವಿದ್ಯಾಭ್ಯಾಸ ಉಡುಪಿಯ ಎಂ.ಜಿ.ಎಂ ನಲ್ಲಿ ಪೂರ್ಣಗೊಳಿಸಿದೆ. ನಾನು ಬಿ.ಎಸ್ಸಿ 'ಜೈವಿಕ ತಂತ್ರಜ್ಞಾನ' ಕಲಿತದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ. ಇದೀಗ, 'ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ-ಕರ್ನಾಟಕ' (NITK), ಸುರತ್ಕಲ್ಲಿನಲ್ಲಿ ಎಂ.ಎಸ್ಸಿ ರಸಾಯನ ಶಾಸ್ತ್ರ ಓದುತ್ತಿದ್ದೇನೆ. 'ಯಾರೂ ಎಲ್ಲರಂತಲ್ಲ', ನಾನೂ ಕೂಡ. ಗೆಳೆತನ, ಪ್ರೀತಿ, ವಿಶ್ವಾಸ, ಒಳ್ಳೆಯಮನಸ್ಸಿಗೆ ಬೆಳೆಕೊದುವವನು ನಾನು. ಸಂಪಾದಿಸಿದ ಗೆಳೆತನವನ್ನು ಜತನದಿಂದ ಕಾಪಾಡುವೆ. ಪುಸ್ತಕಗಳೆಂದರೆ ಬಹಳ ಪ್ರೀತಿ. ವಿಜ್ಞಾನ, ಆಧ್ಯಾತ್ಮ , ಸಾಹಿತ್ಯ- ಇವುಗಳು ನನ್ನ ಮನಸ್ಸಿಗೆ ಹಿತವಾಗಿ ಒಗ್ಗುತ್ತವೆ. ನನ್ನ ಅತ್ಯಂತ ನೆಚ್ಚಿನ ಲೇಖಕ ಪೂರ್ಣಚಂದ್ರ ತೇಜಸ್ವಿ. ಅವರ ಪುಸ್ತಕಗಳನ್ನು ಅಕ್ಷರ ಕಲಿತಂದಿನಿಂದ ಓದುತ್ತಿರುವೆನಾದ್ದರಿಂದ ಏನೋ ಮಮತೆ. ಅಲ್ಲದೆ, ಅವರು ಮಲೆನಾದಿನವರೆಂಬ ಕಾರಣಕ್ಕೆ, ಮನಸ್ಸಿಗೂ ಪರಿಸರಕ್ಕೂ ಹತ್ತಿರ ಎಂಬ ಮಮಕಾರವೂ ಇಲ್ಲದಿಲ್ಲ. ಹಾಗೆಯೇ ಸಂಸ್ಕೃತವನ್ನು ಬಹಳ ಆಸ್ಥೆಯಿಂದ ಕಲಿತವನು, ಅಭ್ಯಾಸ ಮಾಡುತ್ತಿರುವವನು. ಪ್ರಕೃತಿ, ಪ್ರಾಣಿ, ಹೂ, ಗಿಡ, ಮರಗಳ ಒಡನಾಟ ಅಚ್ಚುಮೆಚ್ಚು. ಸಂಗೀತವೆಂದರೆ ಪ್ರಾಣ. ಅಂತರ್ಮುಖಿ. ಮಾತು ಕಡಿಮೆಯೇ. ಬರಹ ನನ್ನ ಹವ್ಯಾಸ.