Blogger
ಮಹೇಶ.ಎಸ್. ಕನ್ನಡ ದೀವಿಗೆ
On Blogger since: March 2012
Profile views: 72,661

My blogs

About me

GenderMale
IndustryEducation
Occupationಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ (Asst. Master, Kannada)
Locationಚಾಮರಾಜನಗರ, ಕರ್ನಾಟಕ, India
Introductionನಾನು ಹುಟ್ಟಿದ್ದು 20 ಆಗಸ್ಟ್ 1977. ನಮ್ಮೂರು ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿಗೆ ಸೇರಿದ ಅಟ್ಟುಗೂಳಿಪುರ. ಕಾವೇರಿಯ ಉಪನದಿಗಳಲ್ಲೊಂದಾದ ಸುವರ್ಣಾವತಿ ನದಿಯ ಮಗ್ಗುಲಲ್ಲಿದೆ. ಪೂರ್ವಕ್ಕೆ ಬಿಳಿಗಿರಿ ಪರ್ವತ ಶ್ರೇಣಿ, ಕಣ್ಮನ ಸೆಳೆಯುವ ಪ್ರಕೃತಿ, ಸುವರ್ಣಾವತಿ ಜಲಾಶಯದ ಸುಂದರ ವಿಹಂಗಮ ನೋಟ ನಿತ್ಯ ನೂತನ. ತಂದೆಯ ಊರು ಚಾಮರಾಜನಗರ ತಾಲೂಕಿನ ಬಿಸಲವಾಡಿ. ಆದರೆ ನನ್ನ ತಂದೆ-ತಾಯಿಯ ಕನಸು ಮತ್ತು ನನ್ನ ಜೀವ-ಜೀವನ ರೂಪುಗೊಂಡದ್ದು ಅಟ್ಟುಗೂಳಿಪುರದಲ್ಲಿ. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಸೋದರ ಮಾವಂದಿರು. ಅದರಲ್ಲೂ ಕಿರಿಯ ಮಾವನವರಾದ ಎ.ಎನ್.ಮಹದೇವಪ್ಪನವರು ನನ್ನ `ಗಾಡ್ ಫಾದರ್'. ಅವರಿಗೆ ನಾನು ಚಿರಋಣಿ. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಅಟ್ಟುಗೂಳಿಪುರದಲ್ಲಿ, ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿಪೂರ್ವಕಾಲೇಜು, ಪದವಿ - ಜೆ.ಎಸ್.ಎಸ್. ಕಾಲೇಜು ಚಾಮರಾಜನಗರ, ಬಿ.ಎಡ್.ವಿದ್ಯಾಭ್ಯಾಸ ಸಿದ್ಧಗಂಗಾ ಶಿಕ್ಷಣ ಮಹಾ ವಿದ್ಯಾಲಯ, ತುಮಕೂರು. ಶಿಕ್ಷಕನಾಗಿ ೧) ಶ್ರೀ ಗಂಗಾಧರೇಶ್ವರ ಪ್ರೌಢಶಾಲೆ, ಕಲ್ಲಂಬಾಳು, ಹೆಗ್ಗಡದೇವನಕೋಟೆ ತಾಲೂಕು ಇಲ್ಲಿ 1999 ರಿಂದ 2000 ವರೆಗೆ, ೨) ಸೆಂಟ್ ಮೆರಿನಾಸ್ ಶಾಲೆ, ಶಿವಾಜಿನಗರ ಮೈಸೂರು ಇಲ್ಲಿ 2001 ಇಂದ 2003 ರವರೆಗೆ, 3) ಸರ್ಕಾರಿ ಪ್ರೌಢಶಾಲೆ, ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ ಇಲ್ಲಿ 2004 ರಿಂದ 2023 ವರೆಗೆ ಕಾರ್ಯನಿರ್ವಹಿಸಿ, ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆಮ್ಮರಗಾಲ, ನಂಜನಗೂಡು ತಾ. ಮೈಸೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
Interestsಕವನ ರಚನೆ, ಹಾಡುವುದು
Google apps
Main menu