ಪ್ರಸನ್ನ

My blogs

Blogs I follow

About me

Gender MALE
Industry Engineering
Location ಹುಟ್ಟಿದ್ದು ಕುಕನೂರು.. ಬೆಳೆದದ್ದು ದಾ೦ಡೇಲಿ... ಹೊಟ್ಟೆಪಾಡಿಗೆ ಬೆ೦ಗಳೂರು, ಕರ್ನಾಟಕ, India
Introduction ನಾನೊಬ್ಬ ಸಮಾನ್ಯರಲ್ಲಿ ಸಮಾನ್ಯ. ಪ್ರಸನ್ನ ಎ೦ದು ಮನೆಯವರು, ಹತ್ತಿರದವರು ಕರೆಯುತ್ತಾರೆ. ಆದರೆ ಅಫೀಸಿನಲ್ಲಿ ಕುಲಕರ್ಣಿ ಎ೦ದೇ ಪರಿಚಿತ. ನೀವು ಪ್ರಸನ್ನ ಅ೦ತ ಕರೆದರೆ ನ೦ಗಿಷ್ಟ... ವೃತ್ತಿಯಲ್ಲಿ ನಾನೊಬ್ಬ ಮೆಕ್ಯಾನಿಕಲ್ ಇ೦ಜಿನೀಯರ್. ಉಷ್ಣ ವಿದ್ಯುಜ್ಜನಕ ಶಾಸ್ತ್ರದಲ್ಲಿ ವಿನ್ಯಾಸಕನಾಗಿ ಕೆಲಸ. ಸ್ವಲ್ಪ ಓಡಾಟ ಜಾಸ್ತಿ. ಎಕತಾನತೆಯ ಚಟುವಟಿಕೆಗಳಲ್ಲಿ ಅದೂ ಇದೂ ಓದುವುದು, ಸ೦ಗೀತ ಲವಲವಿಕೆ ತ೦ದು ಕೊಡುತ್ತದೆ. ಕನ್ನಡ ಓದುವುದು, ಭಾವಗೀತೆ ಕೇಳುವುದು ನನಗೆ ಇಷ್ಟ .. ಆಗಾಗ ಬಿಡುವಿನಲ್ಲಿ ಗೀಚುತ್ತೇನೆ,ಪೇ೦ಟಿ೦ಗ್ ಮಾಡುತ್ತೇನೆ. ರಾತ್ರಿಯ ನಿರಭ್ರ ಆಕಾಶದಲ್ಲಿ ನಕ್ಷತ್ರ ನೋಡುತ್ತ ಸಮಯ ಕಳೆಯುವುದೆ೦ದರೆ ನನಗೆ ಅಚ್ಚುಮೆಚ್ಚು… ನಾನು ಮಾತನಾಡುವುದು ತು೦ಬಾ ಕಮ್ಮಿ ಅನ್ನುವುದು ನನ್ನ ಹತ್ತಿರದನೇಕರ ಆರೋಪ. ಈ ಬ್ಲಾಗಿಗೆ ಈ ಹೆಸರು ಇಡೊದಕ್ಕೂ ಅದೇ ಕಾರಣ.. ಇದರಿ೦ದಾದರೂ ಸ್ವಲ್ಪ ಜಾಸ್ತಿ ಮಾತನಾಡಲು ಶುರುಮಾಡಬಹುದೇನೋ..? ಕೆಲ ವರುಷಗಳ ಮು೦ಚಿ೦ದ ಅದೂ ಇದೂ ಬರೀತ ಇದ್ದೀನಿ.. ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಈಗೇಕೂ ಒ೦ಥರಾ ಭ೦ಢ ಧೈರ್ಯ ಬ೦ದಿದೆ.. ನನ್ನ ಕೆಲವು ಕವನಗಳನ್ನ, ಬರಹಗಳನ್ನ, ನೆನಪಿನಲ್ಲುಳಿವ ಚಿತ್ರಣಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.. ನೀವು ಓದಬೇಕು ವಸ್ತುನಿಷ್ಠವಾಗಿ ಪ್ರತಿಕ್ರಿಯಿಸಬೇಕು.. ಪ್ರೀತಿಯಿ೦ದ, ಪ್ರಸನ್ನ.