Santhoshkumar LM
My blogs
| Gender | Male |
|---|---|
| Location | India |
| Introduction | ನಮಸ್ಕಾರ ಗೆಳೆಯರೇ, ಹೆಸರು ಸಂತೋಷ್ ಕುಮಾರ್ ಎಲ್.ಎಂ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಕೆಲಸದ ನಿಮಿತ್ತ ಸುತ್ತಿ ಬಂದ ಐದಾರು ದೇಶಗಳು ಬದುಕನ್ನು, ಜನರನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಕಲಿಸಿವೆ. ಪ್ರೀತಿಸಿ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿಗೆ ತಂದೆಯಾಗಿದ್ದೇನೆ. ಸಾಹಿತ್ಯ, ನನಗೆ ಬರೀ ಟೈಮ್-ಪಾಸಿಗಲ್ಲ. ಅದು ನನಗೆ ಹವ್ಯಾಸ, ಮತ್ತು ನನ್ನ ನಾನು ಕಂಡುಕೊಳ್ಳಲು, ಮತ್ತು ಈ ಪ್ರಪಂಚವನ್ನು ನೋಡಲು ಇರುವ ಮತ್ತೊಂದು ಕಣ್ಣು. ಕನ್ನಡದ ಹೆಸರಾಂತ ಸಾಹಿತಿಗಳ ಮತ್ತು ಹೊಸ ಪ್ರತಿಭೆಗಳ ಒಂದಷ್ಟು ಪುಸ್ತಕಗಳನ್ನು ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ. ಬ್ಲಾಗಿನಿಂದ ಶುರುವಾದ ಬರವಣಿಗೆ ಫೇಸ್ಬುಕ್ಕಿನಲ್ಲಿ ಮುಂದುವರೆದು ನನ್ನ ಲೇಖನಗಳು, ಕವಿತೆಗಳು, ಚುಟುಕಗಳು ಕನ್ನಡದ ಪತ್ರಿಕೆಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡಿವೆ. ನನ್ನ ಮನಸ್ಸಿಗೆ ಹಿಡಿಸುವವರೆಗೆ ಅದು ಓದುಗನ ಕೈಸೇರಬಾರದು ಎನ್ನುವುದು ನನಗೆ ನಾ ಹಾಕಿಕೊಂಡ ಚೌಕಟ್ಟು. ಹಾಗಾಗಿಯೇ ಬರೆದ ಪುಸ್ತಕಗಳನ್ನು ಬಿಡುಗಡೆ ಮಾಡಲು ಮನಸ್ಸು ಮಾಡಿಲ್ಲ. ಉಳಿದಂತೆ ಸಾಧನೆ ಅಂತ ಹೇಳಿಕೊಳ್ಳಲು ಏನೂ ಮಾಡಿಲ್ಲ. ಇಷ್ಟು ನನ್ನ ಬಗ್ಗೆ ಪುಟ್ಟ ಇಣುಕುನೋಟ. ಧನ್ಯವಾದಗಳು |

