Blogger
Sachin Sanghe
On Blogger since: May 2012
Profile views: 2,455

My blogs

About me

GenderMale
IndustryEngineering
OccupationSoftware Engineer
LocationGauribidanur/Bengaluru, Karnataka, India
Introductionಸ್ವಂತಿಕೆ..!! ಸ್ವಯಂಪ್ರೇರಣೆ...!!! ಖರ್ಚಿಲ್ಲದೇ ಖುಷಿಕೊಡುವ ಕಲ್ಪನೆಗೊಂದು ರೂಪು ಕೊಡಲೋ, ಬೆಂಬಿಡದೆ ಸತಾಯಿಸುವ ಬೇಸರದ ಕ್ಷಣಗಳ ಬಳಗವನ್ನು ಪುಳಕಿಸಲೋ, ತನ್ನದೇನೂ ತಪ್ಪಿಲ್ಲ ಎಂದು ತೆಪ್ಪಗಿದ್ದ ತಾಳ್ಮೆಯನ್ನು ಕೆಣಕಲೋ ಏನೋ ಎಂಬಂತೆ ಹುಟ್ಟಿಕೊಂಡ ಈ "ಚಟ"ಕ್ಕೆ ನಾನಿಟ್ಟ ಹೆಸರು “ಚಾಕೃತಿ"..! ಸೀಮೆಸುಣ್ಣದಿ ಅರಳುವ ಕಲಾಕೃತಿ..!! ಪೆನ್ನು ಪೆನ್ಸಿಲ್ಲುಗಳ ಪರಿಚಯವಾಗುವ ಮುನ್ನ ನಾವೂ ನೀವೂ ಸ್ಲೇಟಿಗೇ, ಕಪ್ಪು ಬೋರ್ಡಿಗೇ ಅಕ್ಷರ ಕಲಿಸಲು (ಹ್ಹಹ್ಹಹ್ಹಾ) ಬಳಸಿದ ಅದೇ ಚಾಕ್-ಪೀಸ್..; ನನ್ನ ಈ ಕೆತ್ತನೆ ಕಲೆಗೆ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವ ವಸ್ತು..!!(ಪುರಾವೆಗಳನ್ನು ಪಕ್ಕದಲ್ಲೇ ಪೋಣಿಸಿಟ್ಟಿದ್ದೇನೆ). ಅಭ್ಯಾಸವೋ ಹವ್ಯಾಸವೋ ನಿರ್ಣಯಿಸುವ ಅಗತ್ಯವಿಲ್ಲವೆಂಬಂತೆ ನನ್ನಿಂದ ಇದು ಅವಿಭಾಜ್ಯವೇ ಆಗಿದೆ. ತಾಸುಗಟ್ಟಲೇ ವ್ಯಯಿಸಿದ ತನ್ಮಯತೆಗೆ ಧನ್ಯತೆಯೆಂಬಂತೆ ಮೂಡಿದ ವಿಸ್ಮಯವಾಗಿದೆ (ಬೇರೆ ಯಾರಿಗಲ್ಲದಿದ್ದರೂ ನನಗಂತೂ..!). ಇಷ್ಟೊಂದು ಪೀಠಿಕೆಯ ಜರೂರತ್ತೇನು ಎಂದು ಪ್ರೀತಿಯಿಂದ ಕುಹಕವಾಡೋ ಮನಸುಗಳಿಗೆ, ಇಲ್ಲೇನೋ ವಿಷಯ ಖಂಡಿತ ಇದೆ ಎಂದು ಕುತೂಹಲಕ್ಕೆ ಜಾಗ ಮಾಡಿಕೊಡೋ ಕಣ್ಣುಗಳಿಗೆ ನನ್ನ "ಸಾಮ್ರಾಜ್ಯ"ಕ್ಕೆ ಸ್ವಾಗತ..!!! ಇಲ್ಲೆಲ್ಲವೂ chalkಅರ್ಷಕ, chalkಆರದ ಸಾಕಾರ..! (ತುಸು ಹೆಚ್ಚಾಯಿತೇನೋ..! ಆದರೂ "ಇದು ನಾನೇ ಕಲಿತಿದ್ದು" ಅಂದುಕೊಳ್ಳುವಾಗ ಕೈಕುಲುಕುವ ಭಾವನೆ ಅರ್ಧ ಕೆಜಿ ಅಭಿಮಾನ ಮತ್ತೊಂದರ್ಧ ಕೆಜಿ ಗರ್ವ ಹಾಗೂ ಸಂತೃಪ್ತಿಗಳ ಹದವಾದ ಮಿಶ್ರಣ..!!). ಇದೆಂಥಾ chalkಅರಿ..!! ನೋಡಬಯಸಿದರೆ ನಿಮ್ಮ ಬಲ ಮುಂಗೈಯನ್ನು ಹೊದ್ದು ಮಲಗಿರುವ ಮೌಸ್-ನ ಸಹಾಯ ಪಡೆಯಿರಿ...!!!
InterestsChalk Carving, Kannada Lyric Writing, Novel Reading
Favorite booksGruhabhanga, 'If cricket is a religion, Sachin is a god'
Google apps
Main menu