madanna manila

My blogs

Blogs I follow

About me

Gender Male
Industry Agriculture
Occupation agriculturist and business
Location puttur, karnataka, India
Introduction ನನ್ನ ಬಗ್ಗೆ.. ೧೯೫೯ ರಲ್ಲಿ ಪುಣಚದಲ್ಲಿ ಮಣಿಲಾ ಎಂಬಲ್ಲಿ ಹುಟ್ಟಿದ್ದೇನೆಂದು ಅಮ್ಮ ಹೇಳುತ್ತಾರೆ. ೧೯೬೦ ರಲ್ಲಿ ಪುತ್ತೂರಿಗೆ ಬಂದು ಪಾಂಗಲಾಯಿಯಲ್ಲಿ ನೆಲೆಯಾದೆ ಅಪ್ಪ,ಅಮ್ಮ ಮೂರು(೩) ಜನ ಅಣ್ಣಂದಿರು ಹಾಗೂ ಒಬ್ಬ ಅಕ್ಕ ನೊಂದಿಗೆ ೧೯೬೦ರಲ್ಲಿ ಬಂದೆನಂತೆ. ನನಗಾಗ ಒಂದುವರೆ ವರುಷ ವಂತೆ. ಪಾಂಗಲಾಯಿ ಪುತ್ತೂರಿನ ನಗರದ ಮಧ್ಯೆ ಇರುವ ದೊಡ್ದ ಬೈಲು ಮತ್ತು ಮಾಯೆದೆದೆವುಸ್ ಶಾಲೆ ಬಸ್ಸ್ ಸ್ಟಾಂಡ್ ಪಕ್ಕದ ಆ ಕಾಲದ ದೊಡ್ದ ಶಾಲೆಯಲ್ಲಿ.೧೯೭೦ ರ ವರೆಗೆ ಒಡಾಡಿ ಕುಣಿಕುಣಿದಾಡಿದೆ. ಜೊತೆಗೆ ಗಂಗ, ಸತ್ಯಸುಂದರ, ಭಾಸ್ಕರ, ಸಂತೋಷ, ಕುಶಾಲಪ್ಪ,ಅಬ್ಬಾಸ್, ನರಸಿಂಹ ಕಾಮತ್, ನರಸಿಂಹ ನಾಯಕ್, ಇದ್ದರು. ೧೯೮೦ ರ ವೇಳೆಗೆ ಬಿ.ಕಾಮ್ ಆಯಿತು. ಸೆಕೇಂಡ್ ಎಟೆಂಮ್ಟ್. ೨ ವರ್ಷ ಭಾವನೊಂದಿಗೆ ಬಂಗಾಳದ ದುರ್ಗಾಪುರ ವಾಸ.ದಿಕ್ಕು ಬದಲಾಯಿತು. ಊರಿಗೆ ಬಂದು ವಿದ್ಯುತ್ ಗುತ್ತಿಗೆದಾರ ನಾಗಿ ಈಗ ೨೮ ವರ್ಷ ವಾಯಿತು. ಈಗ ಪ್ರಾಯ ೫೦ ದಾಟಿತಷ್ಟೆ. ಕೆಲವೊಮ್ಮೆ:...... ಪ್ರಾಯಾ.... ಹೋಗುತ ಬಂತು ದೇಹ ಒಣಗಿ ನಿಂತರು, ಜೀವದ ಬಡಿವಾರಾ ಏನೆಂಬೆ... ಎಂಬ ಕವಿವಾಣಿ ಎಚ್ಹರಿಸುತ್ತಿದೆ. ಹಾಗಾಗಿ ಮುಂದಿನ ನನ್ನ ನಿಮ್ಮ ತಲೆಮಾರಿಗೆ ನಾನೂ ಒಬ್ಬ ಇದ್ದೆ ಎಂದು ನೆನಪಿಸಿ ಬರೆಯುತ್ತಾ ನಿಮ್ಮನು ಒಂದು ನಿಮಿಷಕ್ಕಾದರೂ ಮುದ ಗೊಳಿಸಲು ಕಲಿತ ಟೈಪಿಂಗ್ ಈಗ ನನಗೆ ಖುಷಿ ಕೊಡುತ್ತಿದೆ. ನಿಮಗೂ ಕೊಡುವಂತಾದರೆ ಧನ್ಯ
Interests ನಗಲು, ನಗಿಸಲು, ಹಾಗೆ ಧನ್ಯತಾ ಭಾವದ ಮುಖವೊಂದನ್ನ ನೋಡಲು ಪ್ರತಿದಿನ ಹುಡುಕುತ್ತೇನೆ. ಇದೇ ಸದ್ಯಕ್ಕೆ ನನ್ನ ಇಂಟ್ರೆಸ್ಟು.
Favorite Movies ಮಹಾಯುದ್ದ ಕಾಲದ ಸಿನಿಮಾ ಹಾಗು ಸಾಹಸ ಮಯ ಚಿತ್ರಗಳು, ದಟ್ಟಡವಿ ಒಳಗಿನ ಚಿತ್ರಗಳು, ಮನ ಕಲಕುವ ಸಾಂಸರಿಕ ತ್ಯಾಗ ದ ಕತೆಗಳು
Favorite Music ಕೊಳಲು, ಹಳೆಯ ಕನ್ನಡ ಚಿತ್ರ ಗಳ ವೀಣೆಗಳು, ಯಕ್ಶಗಾನ, ಭರತ ನಾಟ್ಯ ಭಾವ ಗೀತೆ ಮುಖ್ಯವಾಗಿ ಅಶ್ವತ್ ಪಿಬಿ, ಎಸ್ ಜಾನಕಿ, ಸುಶಿಲಾ, ಮುಕೆಶ್
Favorite Books ಮನಶ್ಯಾಸ್ತ್ರದ್ದು, ಮಕ್ಕಳ ಹಾಗು ಹದಿ ಹರೆಯದವರ ಸಮಸ್ಯೆಯ ಪುಸ್ತಕಗಳು, ಕೌನ್ಸಿಲಿಂಗ್ ಲೇಖನಗಳು

ನಿನ್ನೆ, ಇವತ್ತು ಹಾಗೂ ನಾಳೆ ಏನೆನು ಮಾಡಿದ್ದೀರಿ ಹಾಗು ಮಾಡುತ್ತೀರಿ? ಯಾಕೆ>? ಯಾರಿಗಾಗಿ?