Malukavi.com
My blogs
| Gender | Male |
|---|---|
| Location | ತುಮಕೂರು, ಕರ್ನಾಟಕ, India |
| Introduction | ನನ್ನ ಹೆಸರು ಮಾಳಿಂಗರಾಯ ಊರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಡಿಯಾಪೂರು... ಹುಟ್ಟಿ ಬೆಳೆದಿದ್ದು ನನ್ನಲ್ಲಿನ ತವರೂರು ನಡಕೂರಿನಲ್ಲಿ ಆ...ಊರೆಂದರೆ ನನಗೆ ತುಂಬಾ ಇಷ್ಟ ಯಾಕೆಂದ್ರೆ ಅಲ್ಲಿ ನನ್ನ ಬಾಲ್ಯದ ನೆನಪುಗಳಿವೆ.ನಡಕೂರಿನಲ್ಲಿ ಶಾಲೆ ಇರುವುದು ಕೇವಲ ಐದನೇಯ ತರಗತಿಯ ವರೆಗೆ ಮಾತ್ರ ಅದು ಮುಗಿದ ಮೇಲೆ ಬೇರೆಕಡೆ ಹೋಗುವುದು ಅನಿವಾರ್ಯ ಅಷ್ಟೊಂದು ಸೌಲಭ್ಯ ವಿಲ್ಲದವರು ಐದನೇಯ ತರಗತಿಗೇ ವಿದ್ಯಾಭ್ಯಾಸ ಕೊನೆಯಾಗಿಸುತಿದ್ದರು. ನನ್ನ ಮನೆಯಲ್ಲೂ ಬಡತನದ ಪರಿಸ್ಥಿತಿ ಅಪ್ಪ ಕುಡುಕ ಅವ್ವ ಮತ್ತೆ ಅಕ್ಕ ದುಡಿದ ದುಡ್ಡಲ್ಲೇ ಮನೆ ನಡೆಯುತಿತ್ತು...ನಮ್ಮೂರಿನ ಶಾಲೆ ಓದು ಮುಗಿದ ಮೇಲೆ ನಾನು ಶ್ರೀ ಸಿದ್ಧಗಂಗಾ ಮಠ ಸೇರಬೇಕಾಯಿತು. ಶ್ರೀ ಶಿವಕುಮಾರ ಸ್ವಾಮೀಜಿ ಆಶಿರ್ವಾದ ದೊಂದಿಗೆ ಹತ್ತನೇ ತರಗತಿಯ ವರೆಗೆ ಓದಿದೆ. ನಂತರ ಮಠದಲ್ಲೇ ಇದ್ದುಕೊಂಡು ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿ ಪಿಯುಸೀನೂ ಮುಗಿಸಿದೆ. ಪ್ರಸ್ತುತ ತುಮಕೂರು ವಿವಿಯಲ್ಲಿ ತೃತೀಯ ವರ್ಷದ ಪದವಿ ಕೊನೆಯ ಸೆಮಿಸ್ಟರ್ ಓದುತ್ತಿದ್ದೇನೆ. ಪ್ರಥಮ ವರ್ಷದ ಪದವಿ ಓದುವಾಗ ಕೆ.ವಿ.ಸುಬ್ಬಣ್ಣನವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿ ಓದಿದಾದಮೇಲೆ ನನಗೆ ಸಾಹಿತ್ಯಾಸಕ್ತಿ ಮೂಡಿತು.ನಂತರ ನಾನು ನಾಲ್ಕು ಸಾಲಿನ ಪ್ರೇಮ ಕವಿತೆ ಬರೆಯ ತೊಡಗಿದೆ.ಇವಾಗ ಧೀರ್ಘ ಕವಿತೆ ಕವನ , ಆಗಾಗ ಗಜಲ್ ಗಳನ್ನೂ ಬರೆಯುತಿದ್ದೇನೆ. ಸಾಕಷ್ಟು ಸಾಹಿತ್ಯದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದೇನೆ.ಹಾಗೂ ಸಣ್ಣ ಪುಟ್ಟ ಹೋರಾಟ ಚಳುವಳಿ ಗಳಿಲ್ಲಿ ಭಾಗಿಯಾಗಿದ್ದೇನೆ... |

