Ashwini Bhat Nidpalli

My blogs

About me

Gender Female
Industry Accounting
Location Bangalore, Karnataka, India
Introduction ನಮಸ್ತೆ.. ನಾನು ಕಡಲ ತೀರದವಳು… ಸ್ವಭಾವತಃ ತುಂಬಾನೇ ಭಾವುಕಳು… ಭಾವನೆಗಳೇ ನನ್ನ ಬದುಕಿಗೆ ಜೀವಾಳ… ಏಕಾಂತದಲ್ಲಿ ಪಿಸು ಮಾತುಗಳನ್ನು, ಮಾತಿನ ನಡುವಿನ ನೀರವ ಮೌನವನ್ನು ಹುಡುಕುವ ಮೋದ ಮೊದಲಿಂದಲೂ ನನ್ನೊಳಗಿದೆ… ಮಾನವೀಯ ಮೌಲ್ಯಗಳಿಗೆ ನನ್ನಲ್ಲಿ ಅಪಾರವಾದಂತಹ ಗೌರವವಿದೆ… ದುಃಖ ಭರಿಸಲು ಸ್ವಲ್ಪ ಕಷ್ಟ ಪಡುತ್ತೇನೆ… ಸಂಬಂಧಗಳ ಸೂಕ್ಷ್ಮತೆಗೆ ಸೋರಿ ಹೋಗುತ್ತದೆ ನನ್ನ ಮನಸು… ಹೆಸರು ಅಶ್ವಿನಿ.. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದ ಕೂಸು.. ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರು ನಿವಾಸಿ.. ಆರು ವರ್ಷಗಳ ಹಿಂದೆ "ಭಾವನಾ" ಎಂಬ ಹೆಸರಲ್ಲಿ ಬ್ಲಾಗ್ ಒಂದನ್ನು ಬರೆಯಲು ಶುರುವಿಟ್ಟೆ.. ಆದರೆ ಕೆಲವೇ ತಿಂಗಳುಗಳಲ್ಲಿ ಬದುಕಿನ ಇತರ ಜಂಜಾಟಗಳ ನಡುವೆ ಅದರ ಪ್ರಾಶಸ್ತ್ಯ ಕಡಿಮೆಯಾಗಿ ನನ್ನ ಕನಸಿನ "ಅಮೃತವರ್ಷಿಣಿ" ಮೂಲೆ ಸೇರಿಬಿಡ್ತು.. ಬಹುಶಃ ಮೂಲೆ ಸೇರಿದ್ದು ಆ ಬ್ಲಾಗ್ ಒಂದೇ ಅಲ್ಲ.. ನನ್ನ ಅತೀ ನೆಚ್ಚಿನ ಬರವಣಿಗೆ ಎಂಬ ಹವ್ಯಾಸ ಕೂಡ.. ಆ ಬಳಿಕ ನಾ ಬರೆದ ಲೇಖನ, ಕಥೆಗಳು ಬೆರೆಳೆಣಿಕೆಯಷ್ಟಿರಬಹುದಷ್ಟೇ.. ಈಗ ಮತ್ತೆ ಬರೆಯಬೇಕು ಅನ್ನಿಸ್ತಾ ಇದೆ.. ಮನಸಲ್ಲಿರೋ ನೂರಾರು ಯೋಚನೆಗಳನ್ನು, ಕಲ್ಪನೆಗಳನ್ನು ಅಕ್ಷರ ರೂಪಕ್ಕಿಳಿಸೋ ಇಚ್ಛೆ ಮೂಡಿದೆ.. ಆದರೆ ಈ ಬಾರಿ ಯಾವುದೋ ಅಪರಿಚಿತಳಾಗಿ ಅಲ್ಲ, ಕಲ್ಪಿತ ಹೆಸರಿನಿಂದಲ್ಲ.. ನಾನು ನಾನಾಗಿ ಬರೆಯೋ ಆಸೆ.. ಈ ಕಾರಣಕ್ಕೆ ಮತ್ತೆ ಅದೇ "ಅಮೃತವರ್ಷಿಣಿ"ಯನ್ನ ನಿಮ್ಮ ಮುಂದಿಡುತ್ತಿದ್ದೇನೆ. ಭಾವನಾಳಾಗಿ ಅಲ್ಲ.. ಅಶ್ವಿನಿಯಾಗಿ..!
Favorite Books ಮರಳಿ ಮಣ್ಣಿಗೆ, ನಾ ನಿನ್ನ ಧ್ಯಾನದೊಳಿರಲು, ನೆಹರೂ ಪರದೆ ಸರಿಯಿತು, I am Malala, I too had a love story, Can love happen twice?