Blogger
Raju Avalekar
On Blogger since: January 2015
Profile views: 341

My blogs

About me

GenderMale
IndustryEducation
LocationIndia
Introductionನಾನು ರಾಜು ಅವಳೇಕರ ಮೂಲ ಸ್ಥಳ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಬುದ್ರುಕ್ ಗ್ರಾಮಕ್ಕೆ ಸೇರಿದ ಪರಮೇಶ್ವರ ವಾಡಿ ಎಂಬ ಹಳ್ಳಿ, ನನ್ನ ತಂದೆ ಶ್ರೀ ಭೂಪಾಲ ಅವಳೇಕರ ಈ ಗ್ರಾಮಕ್ಕೆ ನಾನು ಹುಟ್ಟಿದ ಮೇಲೆ ವಲಸೆ ಬಂದು ಶ್ರೀಮಂತರ ಮನೆಯಲ್ಲಿ ಕೃಷಿ ಕೂಲಿಗೆ ಜೀತಕ್ಕೆ ನಿಂತು ನಮ್ಮನ್ನೆಲ್ಲ ಸಾಕಿದರು. ನನ್ನ ತಾಯಿ ದ್ರೌಪದಿ ಅವರು ಸಹ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಇಬ್ಬರೂ ಓದುಬರಹ ಗೊತ್ತಿಲ್ಲ. ಆದರೂ ನನ್ನ ಮಕ್ಕಳು ಕಲಿಯಬೇಕು ಎನ್ನುವ ಹಂಬಲ. ನನ್ನ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ಪರಮೇಶ್ವರ ವಾಡಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ, ಪ್ರೌಢಶಾಲೆ ಉಗಾರ ಪದ್ಮಾವತಿ ವಿದ್ಯಾಲಯದಲ್ಲಿ, ಕಾಲೇಜು ಶಿಕ್ಷಣ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಪಡೆದು. ಬಿ.ಇಡಿ ಅನ್ನು ಧಾರವಾಡದ ವಿಶ್ವವಿದ್ಯಾಲಯ ದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮುಗಿಸಿದೆ. ಮುಂದೆ ನೌಕರಿಗಾಗಿ ಹುಡುಕಾಟ. ವರ್ಷ ಕಳೆದರೂ ಇಲ್ಲ ಜನರ ಅಪಹಾಸ್ಯ. ನಂತರ ಒಂದು ವರ್ಷ ಐ.ಟಿ.ಐ. ಶಿಕ್ಷಣ ಪಡೆದೆ. ಆಗ ನೇಮಕಾತಿ ನಡೆದು ೨೦೦೨ರಲ್ಲಿ ಬೆಂಗಳೂರಿನ ಕಡೆಗೆ ಪಯಣ ಅಲ್ಲಿಯ ವರೆಗೆ ಬೆಂಗಳೂರು ನೋಡಿರಲಿಲ್ಲ. ಕಾರಣ ಬಡತನ. ಎಲ್ಲಿಯೂ ಹೋಗುತ್ತಿರಲಿಲ್ಲ. ರಜಾದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ನಮಗೆ ಬೇಕಾಗುವ ಸಾಮಗ್ರಿಗಳನ್ನು ವಸ್ತುಗಳನ್ನು ಪಡೆದುಕೊಳ್ಳುವ ಅವಕಾಶ. ಈಗ ನೆಮ್ಮದಿಯ ಜೀವನ ಅನ್ನ ನೀಡಿದ ಶಿಕ್ಷಕ ವೃತ್ತಿಯಲ್ಲಿ ಸಾಧ್ಯವಾದಷ್ಟೂ ಕರ್ತವ್ಯ ಮಾಡುತ್ತದ್ದೇನೆ. ಕಷ್ಟಪಟ್ಟರೆ ಸುಖವಿದೆ ಎಂಬುದಕ್ಕೆ ನಾನೇ ಸಾಕ್ಷಿ. ಕಷ್ಟಪಟ್ಟು ನಮ್ಮನ್ನೆಲ್ಲ ಸಾಕಿದ ನಮ್ಮ ತಂದೆ ಈವತ್ತು ಇಲ್ಲ ಆದರೆ ನೆನಪು ಸದಾಕಾಲವೂ ನನ್ನ ಜೊತೆಗೆ.
Google apps
Main menu