Mission SaveSoil

My blogs

About me

Industry Agriculture
Location Vijaypura, Karnataka, India
Introduction ಬಸವರಾಜ ಎನ್. ಬಿರಾದಾರ(ಅಭೀಃ) ಅವರು ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಸತತ 3 ವರ್ಷಗಳ ಕಾಲ ವಿದ್ಯಾರ್ಥಿ ಸಂಘದ ನಾಯಕರಾಗಿ ಕೆಲಸ ಮಾಡುವುದರ ಜೊತೆಗೆ ಎಮ್. ಎಸ್. ಸಿ (ಅಗ್ರಿ) ಯಲ್ಲಿ ಗೋಲ್ಡ್ ಮೆಡಲ್ ಪಡೆದು ಉತ್ತೀರ್ಣರಾಗಿದ್ದಾರೆ. 3 ವರ್ಷ ಪ್ರೈವೆಟ್ ಕಂಪನಿಯಲ್ಲಿ ಸಿ. ಎಸ್. ಅರ್ ಅಧಿಕಾರಿಯಾಗಿ ಮತ್ತು 10 ವರ್ಷ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ವೃತ್ತಿಯ ಜೊತೆಗೆ ನಾಯಕತ್ವ, ವ್ಯಕ್ತಿತ್ವ ವಿಕಸನ, ಪರಿಸರ, ಯೋಗ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಸಾವಿರಕ್ಕಿಂತ ಅಧಿಕ ಉಪನ್ಯಾಸಗಳನ್ನು ವಿವಿಧ ವೇದಿಕೆಗಳಲ್ಲಿ ನೀಡಿದ್ದಾರೆ. ನಾಯಕತ್ವದ ಕುರಿತು 'ಅಭೀಃ', ಯೋಗ ಸಾಧನಗಳ ಮಹತ್ವದ ಕುರಿತು 'ಸಾಧ್ಯತೆ', ಹಾಗೂ ಪ್ರಕೃತಿಯ ಮಹತ್ವದ ಕುರಿತು 'ಉಸಿರು' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. 'ನಿನ್ನೊಳಗಿನ ನಾಯಕ' ಎಂಬ ಕಾರ್ಯಾಗಾರಗಳನ್ನು ಅಯೋಜಿಸುವ ಮೂಲಕ ಹಲವು ಜನರು ವಿವಿಧ ರಂಗಗಳಲ್ಲಿ ನಾಯಕರಾಗಿ ಗುರುತಿಸಿಕೊಳ್ಳುವಂತೆ ಅವರನ್ನು ತರಬೇತಿಗೊಳಿಸಿದ್ದಾರೆ. ಪ್ರಸ್ತುತ ಇವರು ಸದ್ಗುರು ಅವರು ಜಗತ್ತಿನಾದ್ಯಂತ ಪ್ರಾರಂಭಿಸಿದ ಮಣ್ಣು ಉಳಿಸಿ (Save Soil) ಅಭಿಯಾನದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರಾಗಿ ಕೇವಲ 28 ದಿನಗಳಲ್ಲಿ ಏಕಾಂಗಿಯಾಗಿ ಬೈಕ್ ಮೂಲಕ ಉತ್ತರ ಕರ್ನಾಟಕದಾದ್ಯಂತ 3000 ಕಿ. ಮೀ. ಪ್ರಯಾಣಿಸಿ, 155 ಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಲ್ಲಿ ಮಣ್ಣಿನ ಕುರಿತು ಜಾಗೃತಿ ಮೂಡಿಸಿದ್ದಾರೆ. ಮುಂದುವರೆದು ವಿವಿಧ ಸಂಘ- ಸಂಸ್ಥೆಗಳು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಣ್ಣಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಮ್ಮ ಜನಾಂದೋಲನ ಮುಂದುವರೆಸಿದ್ದಾರೆ.