ಕೆ. ಹೆಚ್. ಎ ನಈಮಿ ಪೊನ್ಮಲ
My blogs
| Gender | Male |
|---|---|
| Location | MANGALORE, karnataka, India |
| Introduction | ನನ್ನ ಕುರಿತು ನಾನು ಎಂಬ ಅಹಂ ನನ್ನಲಿಲ್ಲ ಎನ್ನಲಾರೆ..... ಅದಿಲ್ಲದೆ ನಾನು ನಾನಾದೆನೆ? ಅದರೆ ನಾನು ನೀನು ಸೇರಿ ನನ್ನತನವನ್ನು ನೀನ್ನತನವನ್ನು ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು ಗೆಳೆತನದ ಹೂವ ಅರಳಿಸಬಲ್ಲೆವು ಅಲ್ಲವೆ ಸ್ನೇಹಿತ ಬದುಕಿನಲ್ಲಿ ಏರಿಳಿತ ಸಾಮಾನ್ಯ.. ಜೀವನದ ಉನ್ನತಕ್ಕೆರುವಾಗ ಅತಿಯಾಗಿ ಹಿಗ್ಗದೆ, ಕಷ್ಟಗಳೆಂಬ ಇಳಿತದಲ್ಲಿ ಕುಗ್ಗದೆ ಸರಿಸಮವಾಗಿ ಸಾಗಿದರೆ ಜೀವನ ಸಂತೋಷಮಯವಾಗುವುದರಲ್ಲಿ ಸಂಶಯವಿಲ್ಲ. ಏನೇ ಬರಲಿ ನಗುನಗುತಾ ಸ್ವೀಕರಿಸುವ ಹುಮ್ಮಸ್ಸಿದ್ದರೆ ಕಾಲನೂ ಹೊಟ್ಟೆಕಿಚ್ಚಿನಿಂದ ನರಳಬೇಕು.... ನಾ ಇಲ್ಲಿಯತನಕ ಬಂದ ಹಾದಿಯೇನು ಹೂವಿನ ಹಾಸಿಗೆಯಲ್ಲ ಎಂಬುದು ಗೊತ್ತು. ಈಗಲೂ ಅದು ನನ್ನ ಪಾಲಿಗೆ ಇಲ್ಲ ಎಂದೂ ಗೊತ್ತು. ಮುಳ್ಳಿನ ಹಾದಿಯಲ್ಲಿ ನಡೆದ ನನಗೆ ಅದರ ಅನುಭವ ಎಂಥಹ ದುಃಖವನ್ನು ಮರೆಸುವ ಮಹಾನ್ ವಿದ್ಯೆಯನ್ನು ಕಲಿಸಿದೆಯಲ್ಲಾ!!!! ಅದಕ್ಕಾಗಿಯಾದರೂ ಕಷ್ಟಗಳಿಗೆ ಋಣಿಯಾಗಿರುತೇನೆ. ದುಃಖಗಳು ಮಂಜಿನಂತೆ ಕರಗಿ ಸುಖವು ಶುಭ್ರ ಆಕಾಶದಂತಿರಲಿ.... ಮನಸ್ಸು ಒಂದು ಪರಿಶುದ್ಧ ದೇಗುಲ.. ಆ ದೇಗುಲದೊಳಗೆ ಕೆಟ್ಟತನಗಳೆಂಬ ಕಳ್ಳಕಾಕರಿಗೆ ಆಶ್ರಯ ಕೊಡದಿರುವ ..... ಹಿರಿಯರಿಗೆ ಗೌರವ, ಕಿರಿಯರಲ್ಲಿ ವಿನಯವಂತನಾಗಿ ಇನ್ನೊಬ್ಬರ ನೋವಿನಲ್ಲಿ ಮಿಡಿಯುವ ಹೃದಯ ನನ್ನದಾಗಲಿ ಎಂಬ ಆಶಯದೊಂದಿಗೆ |

