Sriii :-)
My blogs
Blogs I follow
| Gender | Male |
|---|---|
| Industry | Automotive |
| Occupation | Engineer |
| Location | UDUPI, Bangalore, KARNATAKA, India |
| Introduction | ನನ್ನ ಹೆಸರು ಶ್ರೀ ಪ್ರಸಾದ್, ಸ್ನೇಹಿತರ ಬಾಯಲ್ಲಿ ಬರೀ "ಶ್ರೀ" ಅಷ್ಟೇ. ವ್ರತ್ತಿಯಲ್ಲಿ ಎಂಜಿನೀರ್, ಹುಟ್ಟಿದ್ದು ಉಡುಪಿ ಜಿಲ್ಲೆಯಲ್ಲಿ, ಕೆಲಸ ಮಹಾನಗರಿ ಬೆಂಗಳೂರಿನಲ್ಲಿ. .ಓದುವುದು ನನ್ನ ಗೀಳು.ಹೀಗೆ ಒಮ್ಮೆ ಪ್ರಭುರಾಜ್ ಅನ್ನೋರು ಬರೆದ ನನ್ನಾಕೆ ಅನ್ನೋ ಒಂದು ಲೇಖನ ಓದಿ ಕ್ಲೀನ್ ಬೌಲ್ಡ್ ಆಗಿ ನಾನೂ ಬರೆಯಲು ಶುರು ಮಾಡಿದರೆ ಹೇಗೆ ಅನ್ನೋ ಆಲೋಚನೆ ಬಂದು ಬರೆಯಲು ಶುರು ಮಾಡಿದೆ. ನಾನು ಬರೆದದ್ದನ್ನು ನೋಡಿ ನನ್ನನ್ನು ತಿದ್ದಿ ತೀಡಿದ ನನ್ನ ಸ್ನೇಹಿತರ ಸಲಹೆಯಂತೆ ಈ ಬ್ಲಾಗ್ ಶುರು ಮಾಡಿದೆ. ನಾನು ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ, ಮಾತೃ ಭಾಷೆ ತುಳು, ಕೆಲಸ ಮಾಡ್ತಾ ಇರೋದು ಬೆಂಗಳೂರಿನಲ್ಲಿ, ನನ್ನ ಮಿತ್ರರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಆದ್ದರಿಂದ ನನ್ನ ಭಾಷೆ ಎಲ್ಲಾ ಕನ್ನಡಗಳನ್ನು ಸೇರಿಸಿ ಮಾಡಿದ ಬಿಸಿಬೇಳೆ ಬಾತ್ ಆಗಿದೆ. ಆಗಾಗ ನನ್ನ ಮನಸ್ಸಿನಲ್ಲಿ ಹುಟ್ಟೋ ಹುಚ್ಚು ಕಲ್ಪನೆಗಳು, ಉತ್ತರಗಳೇ ಇಲ್ಲದ ಸಾವಿರ ಪ್ರಶ್ನೆಗಳು, ತಲೆ ಬುಡ ಇಲ್ಲದಿರೋ ಆಲೋಚನೆಗಳು ನನ್ನ ದಿನಚರಿಯಲ್ಲಿ ಬ೦ದು ಹೋಗೋ ವಿಷಯಗಳು, ಸ್ನೇಹಿತರ ಜೊತೆ ಒ೦ದು ಟೀ ಕಪ್ ಜೊತೆ ಚರ್ಚಿಸಿದ ಆಗು ಹೋಗುಗಳು ಪಾತ್ರಗಳಾಗಿ ಈ BLOG ನಲ್ಲಿ ಅಡಗಿವೆ. ಯಾವುದೋ ವಿಷಯ ಬರೆಯಲು ಆರಂಭಿಸಿ ಎಲ್ಲೆಲ್ಲೋ ಗಿರಕಿ ಹೊಡೆದು ಪ್ರಸ್ತುತ ಸನ್ನಿವೇಶಗಳನ್ನು ಸೇರಿಸಿ ಇನ್ನೆಲ್ಲೋ ಮುಗಿಸೋದು ರೂಡಿ. ಅದಕ್ಕೆ "ತರಲೆ" ಅ೦ತ ಹೆಸರಿಟ್ಟಿದ್ದೇನೆ. ಇಲ್ಲಿ ಬರೆದಿರೋ ಎಲ್ಲ ವಿಷಯಗಳು ನನ್ನ ಕಲ್ಪನೆ ಹಾಗೂ ಅನಿಸಿಕೆ ಮಾತ್ರ ...ನಿಮಗೆ ಏನು ಅನಿಸುತ್ತೆ ಅ೦ತ ಮಾತ್ರ ದಯವಿಟ್ಟು comments ಹಾಕಿ... |

