ಶ್ರೀವತ್ಸ ಕಂಚೀಮನೆ.

My blogs

About me

Gender Male
Location Yellapur, Bangalore, Karnataka, India
Introduction "ಬದುಕೆಂಬ ಪಾಠಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು..." ಪರೀಕ್ಷೆ ನಡೆಸಿ ನಂತರ ಪಾಠ ಹೇಳುವ, ಅನುಭವದ ನೆಲೆಯ ಅದರ ಕಲಿಕಾ ಪದ್ಧತಿಯೆಡೆಗೆ ಒಮ್ಮೆಲೇ ಬೆರಗು ಮತ್ತು ಆತಂಕದಿಂದ ನೋಡುತ್ತಿದ್ದೇನೆ. ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ, ಬದುಕಿಗೆ ಬೆನ್ನು ತಿರುಗಿಸಲು ಇಷ್ಟವಿಲ್ಲದೇ ತೊಳಲಾಡುತ್ತಿದ್ದೇನೆ. ಈ ಎಲ್ಲ ತೊಳಲಾಟಗಳು, ಬುದ್ಧಿ ಹುಟ್ಟು ಹಾಕುವ ದ್ವಂದ್ವಗಳು, ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವೆಲ್ಲವುಗಳಿಗೆ ಅಕ್ಷರ ರೂಪ ನೀಡುವ ಸಣ್ಣ ಪ್ರಯತ್ನವೇ ಈ ಬ್ಲಾಗ್... ಮಲೆನಾಡಿನ ದಟ್ಟ ಕಾನನದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನನ್ನ ತೀವ್ರವಾಗಿ ಸೆಳೆದು ಕಾಡಿದ ವಿಷಯಗಳೆಂದರೆ - ನಡು ಮಧ್ಯಾಹ್ನದ ಧೋಮಳೆ, ಸರಿ ರಾತ್ರಿಯ ಬೆಳದಿಂಗಳು, 'ಹೆಣ್ಣೆದೆ'ಯ ಚೆಲುವು ಮತ್ತು 'ಹೆಣ್ಮನ'ದ ಒಲವು, ಬೆರಗು ಮೂಡಿಸುವ ವಿಪರೀತ ವೈರುಧ್ಯಗಳ ಬದುಕು ಮತ್ತು ಹುಟ್ಟಿನೊಂದಿಗೇ ಬೆನ್ನುತಬ್ಬಿ ಬಂದು ತಲ್ಲಣಗೊಳಿಸುವ ಸಾವು... ಹಾಗಾಗಿ ಈ ಕುರಿತೇ ಜಾಸ್ತಿ ಬರೆದಿದ್ದರೆ ಅದು ನನ್ನ ತಪ್ಪಲ್ಲ... ಖುಷಿಯ ರಿಂಗಣದ, ಕಂಗೆಡಿಸುವ ತಲ್ಲಣದ, ಎನ್ನೆದೆಯ ಭಾವಗಳ ಪದಗಳಲಿ ಬಿಚ್ಚಿಡುವ ಪುಟ್ಟ ಪ್ರಯತ್ನ ನನ್ನದು... ಓದುವ ಒದ್ದಾಟ ನಿಮ್ಮದಾಗಲಿ... ::: :: : ಭಾವ ಸಂವಹನಕ್ಕೆ: kanchimane@gmail.com :::೮೦೮೮೪೮೮೦೯೫::: https://www.facebook.com/shrivatsa.kanchimane