Datta3
My blogs
| Introduction | ಮೂಲತ: ತೀರ್ಥಹಳ್ಳಿ ಸಮೀಪದ ಕಟ್ಟೆಹಕ್ಕಲು ನನ್ನೂರು. ವಿದ್ಯಾಭ್ಯಾಸ ಕಟ್ಟೆಹಕ್ಕಲು, ತೀರ್ಥಹಳ್ಳಿ ಯಲ್ಲಿ. ಸದ್ಯಕ್ಕೆ ಈಗ ಬೆಂಗಳೂರಿನಲ್ಲಿ ವಾಸ. ಬೆಂಗಳೂರಿನ ಒಂದು ಖಾಸಗಿ ಕಂಪೆನಿಯೊಂದರಲ್ಲಿ ಯೂ ಐ ಡಿಸೈನರ್ ಉದ್ಯೋಗ. ಬಾಲ್ಯದಿಂದಲೇ ವ್ಯಂಗ್ಯಚಿತ್ರಗಳ ಬಗ್ಗೆ ಆಸಕ್ತಿ. ಮುಂದೆ ಕಾಲೇಜಿನಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ಶ್ರೀ ನಟರಾಜ್ ಅರಳಸುರಳಿ ಯವರು ಪ್ರಾದ್ಯಾಪಕ ರಾಗಿದ್ದು ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಇನ್ನಷ್ಟು ಆಸಕ್ತಿ ಮೂಡಲು ಕಾರಣವಾಯ್ತು. ನಂತರ ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನ್ ನಲ್ಲಿ 3 ವರ್ಷದ ಕಂಪ್ಯೂಟರ್ ಸೈನ್ಸ್ ಡಿಪ್ಲೋಮೊ ಮಾಡಿದೆ. ಅಲ್ಲಿನ ಪ್ರಾಂಶುಪಾಲರಾದ ಶ್ರೀ ಸುಂದರೇಶ್ ರವರ ನಿರಂತರ ಪ್ರೋತ್ಸಾಹ ಕಾರ್ಟೂನ್ ಬರೆಯಲು ಇನ್ನಷ್ಟು ಹೆಚ್ಚಾಯ್ತು. ನಂತರ ಬೆಂಗಳೂರಿನತ್ತ ಬದುಕು ಕಟ್ಟಿಕೊಳ್ಳಲು ಪಯಣ. ಬೆಂಗಳೂರಿಗೆ ಬಂದ ಹೊಸದರಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ಯೋಚಿಸಿತೊಡಗಿದಾಗ ಅನಿಸಿದ್ದು ನನ್ನ ಆಸಕ್ತಿ ಮತ್ತು ಮಾಡುತ್ತಿರುವ ಕೆಲಸಕ್ಕೂ ಒಂದಕ್ಕೊಂದು ಸಂಭಂದ ಇಲ್ಲ ಅಂತ! ನಂತರ ಆ ಕೆಲಸಕ್ಕೆ ಗುಡ್ ಬೈ ಹೇಳಿ, ಹೆಸರಾಂತ ಕಲಾವಿದ ಶ್ರೀ ಗುಜ್ಜಾರ್ ಅವರ ಆನಿಮೇಷನ್ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದ್ದು ಬದುಕಿನಲ್ಲಿನ ದೊಡ್ಡ ತಿರುವು. ಮುಂದೆ ಮತ್ತೆ ಮಾತಾಡೋಣ, ಸದ್ಯಕ್ಕೆ ಇಷ್ಟು ಸಾಕ |
|---|

